By : Oneindia Kannada Video Team
Published : November 28, 2017, 10:12

ವಿನಯ ಕುಲಕರ್ಣಿ ರಾಜೀನಾಮೆಗೆ ಪಟ್ಟು, ಸಿಎಂ ಹೇಳುವುದೇನು?

ಗದಗ, ನವೆಂಬರ್ 28 : 'ಸಚಿವ ವಿನಯ ಕುಲಕರ್ಣಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿರುವುದರಿಂದ ಅವರ ವರ್ಚಸ್ಸು ಹಾಳು ಮಾಡಲು ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ಗದಗದ ಜಿಲ್ಲೆಯ ನರಗುಂದದಲ್ಲಿ ಸೋಮವಾರ ಮಾತನಾಡಿದ ಅವರು, 'ಬಿಜೆಪಿಯವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಂಪಯ್ಯ ಅವರ ಹೆಸರನ್ನು ಸೇರಿಸುತ್ತಿದ್ದಾರೆ' ಎಂದರು.'ಸಚಿವ ವಿನಯ ಕುಲಕರ್ಣಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಾ ಭಾಗವಹಿಸಿದ್ದಾರೆ. ಆದ್ದರಿಂದ, ಅವರ ವರ್ಚಸ್ಸು ಹಾಳು ಮಾಡಲು ಬಿಜೆಪಿ ಮತ್ತು ಬಿ.ಎಸ್.ಯಡಿಯೂರಪ್ಪ ಹುನ್ನಾರ ನಡೆಸಿದ್ದಾರೆ' ಎಂದು ದೂರಿದರು.'ಮೂರು ವರ್ಷಗಳಿಂದ ಸುಮ್ಮನಿದ್ದ ಯಡಿಯೂರಪ್ಪ ಈಗ ಒಂದು ತಿಂಗಳಿನಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಿ ನೀರು ಹರಿಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ನಿನ್ನ ಕೈ ಮುಗಿತೀನಿ, ದಯವಿಟ್ಟು ಆ ಕೆಲ್ಸಾ ಮಾಡ್ಸಪ್ಪಾ' ಎಂದು ಕುಟುಕಿದರು. 'ಪ್ರಧಾನಿ ಅವರ ಮಧ್ಯಸ್ಥಿಕೆಯಿಂದ ಮಾತ್ರ ಮಹದಾಯಿ ವಿವಾದ ಬಗೆಹರಿಯಲು ಸಾಧ್ಯ. ಸಂಧಾನಕ್ಕಾಗಿ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಆದರೆ, ಬಿಜೆಪಿಯವರು ಮುಂದೆ ಬರುತ್ತಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!