By : Oneindia Kannada Video Team
Published : March 07, 2018, 09:14

ಸಿಟಿಜನ್ ವಾಯ್ಸ್ : ಜಯನಗರದ ಸಮಸ್ಯೆಗಳಿಗೆ ಜನರ ದನಿ

ಜಯನಗರ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು. ನೋಡಲು ಸುಂದರವಾಗಿದ್ದರೂ ಒಳಗೆ ಹಲವಾರು ಸಮಸ್ಯೆಗಳು ತಳಕುಹಾಕಿಕೊಂಡಿವೆ. ಜಯನಗರ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ವರ್ತಕರು ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ದನಿಯಾಗಿದ್ದಾರೆ.

ಬಟ್ಟೆ ವ್ಯಾಪಾರಿಯಾಗಿರುವ ಒಬ್ಬರು, ಇಲ್ಲಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಬಗೆಹರಿಸಲು ಸಾಧ್ಯವೇ ಇಲ್ಲ. ಇಲ್ಲಿ ಹೊಸ ಮುಖಗಳು ಬರಬೇಕು, ಕೆಲಸ ಮಾಡುವವರು ಸರಕಾರ ರಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯನಗರ ಅತ್ಯಾಧುನಿಕ ಬಡಾವಣೆಯಂತೆ ಕಾಣುತ್ತಿದ್ದರೂ ಇಲ್ಲಿ ನೀರಿನ ಸಮಸ್ಯೆಗಳಿವೆ, ಜನರಿಗೆ ಸುರಕ್ಷತೆ ಸಿಗುತ್ತಿಲ್ಲ ಎಂದು ದೂರಿದರು. ಅಲ್ಲದೆ, ಮಹಿಳೆಯರಿಗೆ ಸುರಕ್ಷೆ ಸಿಗಬೇಕಿದ್ದರೆ ಎಲ್ಲ ಬಡಾವಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ತುರ್ತಾಗಿ ಅಳವಡಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ, ಎಲ್ಲರ ಕೇಂದ್ರ ಬಿಂದುವಾಗಿರುವ ಜಯನಗರ ಕಾಂಪ್ಲೆಕ್ಸ್ ನ ಹೊಸ ಕಟ್ಟಡ ಇನ್ನೂ ಉದ್ಘಾಟನೆಯಾಗದೆ ಇರುವುದು ಭಾರೀ ಬೇಸರ ತಂದಿದೆ. ಆದಷ್ಟು ಬೇಗ ಇಲ್ಲಿನ ಶಾಸಕರು ವಿವಾದವನ್ನು ಬಗೆಹರಿಸಿ, ಹೊಸ ಕಾಂಪ್ಲೆಕ್ಸನ್ನು ತೆರೆಯಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more