• search
By : Oneindia Kannada Video Team
Published : December 24, 2017, 04:39

ಕ್ರಿಸ್ ಮಸ್ 2017 ವಿಶೇಷ : 3 ಬಣ್ಣಗಳ ಹಿಂದಿರುವ ರೋಚಕ ಕಥೆ

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಎಲ್ಲರ ಮನೆಗಳಲ್ಲೂ ಹಬ್ಬದ ತಯಾರಿಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಿರುತ್ತಾರೆ. ಕ್ರಿಸ್‌ಮಸ್ ಮರದ ಅಲಂಕಾರ, ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಉಡುಗೊರೆಗಳ ಖರೀದಿ ಹೀಗೆ ಹಬ್ಬಕ್ಕಾಗಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟುತ್ತಿರುತ್ತದೆ.ಆದರೆ ಕ್ರಿಸ್‌ಮಸ್ ಆಚರಣೆಯಲ್ಲಿ ಬಣ್ಣಗಳ ಮಹತ್ವವನ್ನು ಅರಿತಿದ್ದೀರಾ? ಕೆಲವೊಂದು ಬಣ್ಣಗಳಿಲ್ಲದೆ ಕ್ರಿಸ್‌ಮಸ್ ಆಚರಣೆ ಕಳೆಗಟ್ಟುವುದೇ ಇಲ್ಲ. ಆ ಬಣ್ಣಗಳೇ ಕೆಂಪು, ಹಸಿರು ಮತ್ತು ಚಿನ್ನದ ಬಣ್ಣವಾಗಿವೆ. ಕ್ರಿಸ್‌ಮಸ್‌ ಆಚರಣೆಯೊಂದಿಗೆ ಈ ಬಣ್ಣಗಳು ಅವಿನಾಭಾವ ಸಂಬಂಧವನ್ನು ಪಡೆದುಕೊಂಡಿದ್ದು ಕ್ರಿಸ್ತನು ಹೇಳಿರುವ ಮೂರು ಪಾಠಗಳ ಪರಿಚಯವನ್ನು ಇದು ಮಾಡಿಕೊಡುತ್ತದೆ. ಬನ್ನಿ ಹಾಗಿದ್ದರೆ ಈ ಬಣ್ಣಗಳ ವಿಶೇಷತೆಯೇನು ಎಂಬುದನ್ನು ಅರಿತುಕೊಳ್ಳೋಣ...ಕ್ರಿಸ್ತನನ್ನು ಶಿಲುಬೆಗೇರಿಸುವುದನ್ನು ಪ್ರತಿನಿಧಿಸುವ ಬಣ್ಣ ಕೆಂಪಾಗಿದೆ. ಪ್ರೇಮದ ಪಾಠವನ್ನು ಕ್ರಿಸ್ತನು ಜಗತ್ತಿಗೆ ಸಾರಿರುವುದನ್ನು ಕೆಂಪು ಬಣ್ಣವು ತಿಳಿಸುತ್ತದೆ. ದೇವರ ಪ್ರೀತಿ ಅಪ್ಯಾಯಮಾನವಾಗಿರುತ್ತದೆ ಮತ್ತು ಇದಕ್ಕೆ ಪರಿಧಿ ಇರುವುದಿಲ್ಲ. ಅವರು ತಮ್ಮ ಮಗನನ್ನು ಭೂಮಿಗೆ ಕಳುಹಿಸಿದ್ದೇ ಮಾನವರನ್ನು ಪ್ರೀತಿಯಿಂದ ಬಂಧಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more