By : Oneindia Kannada Video Team
Published : November 09, 2017, 05:59

ಚೆನ್ನೈ ಐಟಿ ದಾಳಿಗೂ ಮೋದಿ ಏನ್ ಸಂಬಂಧ?

ಚೆನ್ನೈಯಲ್ಲಿ ಐಟಿ ದಾಳಿ: ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿರುವುದೇಕೆ? ಪ್ರಧಾನಿ ನರೇಂದ್ರ ಮೋದಿ, ಡಿಎಂಕೆ ನಾಯಕ ಕರುಣಾನಿಧಿಯವರನ್ನು ಭೇಟಿಯಾಗಿದ್ದಕ್ಕೂ, ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಐಟಿದಾಳಿಗೂ ಏನಾದರೂ ಸಂಬಂಧವಿದೆಯಾ? ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೌದು ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಐಟಿ ರೇಡ್ ಟ್ರೆಂಡಿಂಗ್ ಆಗಿದೆ. ಟ್ವಿಟ್ಟರ್ ನಲ್ಲಿ ಐಟಿ ದಾಳಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದು ಬಿಜೆಪಿಯ ಕೀಳುಮಟ್ಟದ ರಾಜಕೀಯ ಆಟ ಎಂದು ಕೆಲವರು ಬರೆದುಕೊಂಡಿದ್ದಾರೆ. ಅದರಲ್ಲೂ ಅಪನಗದೀಕರಣದ ವಿರುದ್ಧ ಕರಾಳ ದಿನ ಆಚರಿಸಲು ಮುಂದಾಗಿದ್ದ ಡಿಎಂಕೆ, ಮೋದಿ-ಕರುಣಾನಿಧಿ ಬೇಟಿಯ ನಂತರ ತನ್ನ ನಿರ್ಧಾರವನ್ನು ಬದಲಿಸಿದ್ದಕ್ಕೂ, ಈ ದಾಳಿಗೂ ತಳುಕು ಹಾಕುವ ಪ್ರಯತ್ನವೂ ನಡೆಯುತ್ತಿದೆ."ಈ ದಾಳಿ ಆದದ್ದು ಒಳ್ಳೆಯದಾಯಿತು. 'ಅಮ್ಮಾ'ಅವರಿಗೆ ಶಶಿಕಲಾ ನಟರಾಜನ್ ಮಾಡಿದ ಮೋಸಕ್ಕೆ ತಕ್ಕ ಶಾಸ್ತಿಯಾಗುತ್ತಿದೆ" ಎಂದವರೂ ಇದ್ದಾರೆ. ಒಟ್ಟಿನಲ್ಲಿ ದಾಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕೆಲವರು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದರೆ ಮತ್ತೆ ಕೆಲವರು ಶಶಿಕಲಾ ನಟರಾಜನ್, ತಾವು ಮಾಡಿದ ಪಾಪಕ್ಕೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!