By: Oneindia Kannada Video Team
Published : January 04, 2018, 11:54

ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ನಾಯಕನ ಇಂಟರ್ವ್ಯೂ

Subscribe to Oneindia Kannada

"ನಾನು ವಿಜಯವಾಣಿಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಬರೆದಿದ್ದ ಸಾಲು ಏನೆಂದರೆ, ಐದೈದು ಸಲ ಗೆದ್ದರೂ ತಮ್ಮ ಕ್ಷೇತ್ರಕ್ಕೆ ಐದು ಪೈಸೆಯ ಕೆಲಸ ಮಾಡಿರುವುದಿಲ್ಲ. ಜನಪತಿನಿಧಿಗಳಾಗಿ ಐದಾರು ಸಲ ಆಯ್ಕೆಯಾದರೂ ಯಾವುದೇ ಕೆಲಸ ಮಾಡದವರಿಗೆ ನಾನು ಹಾಗೆ ಬರೆದಿದ್ದೆ. ಅದರಲ್ಲಿ ತಪ್ಪೇನಿದೆ? ಮತ್ತು ಯಾವ ವ್ಯಕ್ತಿಯ ಪ್ರಸ್ತಾವ ಇದೆ?" -ಹೀಗೆ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆಯವರು ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಎಸೆದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಿರ್ದಿಷ್ಟ ಚಿಂತನೆಯ ಹಾಗೂ ಆಲೋಚನೆಯವರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಲಿಬೆಲೆ ಬದಲಾಗಿದ್ದಾರೆ ಹಾಗೂ ದುಡ್ಡಿಗೆ ಮಾರಾಟ ಆಗಿದ್ದಾರೆ ಎಂಬುದು ಆಕ್ಷೇಪ.ಜತೆಗೆ ಕೇಂದ್ರದಲ್ಲಿ ಕೌಶಲಾಭಿವೃದ್ಧಿ ಖಾತೆಯ ರಾಜ್ಯ ಸಚಿವರೂ ಆಗಿರುವ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರನ್ನು ಗುರಿ ಮಾಡಿಕೊಂಡು ಇಂಥದ್ದೊಂದು ಲೇಖನ ಹಾಗೂ ಹೇಳಿಕೆಯನ್ನು ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ ಎಂಬುದು ಕೂಡ ಮತ್ತೊಂದು ಆಕ್ಷೇಪ. ಅಸಲಿಗೆ ಆಗಿದ್ದೇನು ಎಂಬುದರ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರ ಸಂದರ್ಶನವನ್ನು ಒನ್ಇಂಡಿಯಾ ಕನ್ನಡ ಮಾಡಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!