By : Oneindia Kannada Video Team
Published : March 10, 2018, 01:30

ಸಿದ್ದರಾಮಯ್ಯ ಮೋದಿಯವರನ್ನ ಟಾರ್ಗೆಟ್ ಮಾಡಿ ತಪ್ಪು ಮಾಡಿದ್ರಾ?

ನರೇಂದ್ರ ಮೋದಿಯವರನ್ನೇ ನೇರಾನೇರ ಎದುರಿಸುವ ಮೂಲಕ ಸಿದ್ದರಾಮಯ್ಯ ತಪ್ಪು ಮಾಡಿದರಾ? ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಲ್ಲಿ- ಬಂದಲ್ಲಿ ನರೇಂದ್ರ ಮೋದಿ ಅವರನ್ನೇ ತಡವಿಕೊಂಡು ಸಿದ್ದು ತಪ್ಪು ಮಾಡಿದರು ಎಂದು ಬಿಜೆಪಿ ಪಾಳಯದಲ್ಲಿ ಮಾತು ಹರಿದಾಡುತ್ತಿದೆ. ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಹಾಗೂ ಮೋದಿ ವಿರುದ್ಧದ ಈ ಕದನ ಎಂಬಂತೆ ಬಿಂಬಿಸಿದರು. ಇದು ಸಿದ್ದರಾಮಯ್ಯ ಮಾಡಿದ ಬಹು ದೊಡ್ಡ ತಪ್ಪು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಚಾಲ್ತಿಯಲ್ಲಿದೆ. ರಾಷ್ತ್ರೀಯ ನಾಯಕರೊಬ್ಬರನ್ನು ತಡವಿಕೊಂಡ ಸಿದ್ದರಾಮಯ್ಯ ಅವರಿಗೆ ಈ ಆಟದ ಪರಿಣಾಮ ಏನು ಎಂಬ ಅಂದಾಜಿರಲಿಕ್ಕಿಲ್ಲ ಎಂಬುದು ಸಹ ಸದ್ಯಕ್ಕೆ ಚರ್ಚೆಯ ವಿಷಯ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!