By : Oneindia Kannada Video Team
Published : November 08, 2017, 06:52

ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಿ ಮ್ ಇಬ್ರಾಹಿಂ

ಸಿ.ಎಂ.ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ಆಪ್ತರು. 2013ರ ಚುನಾವಣೆಯಲ್ಲಿ ಕ್ಷೇತ್ರದ ಹಾಲಿ ಶಾಸಕ ಸಂಗಮೇಶ್ ಅವರನ್ನು ಕಡೆಗಣಿಸಿ ಭದ್ರಾವತಿಯಲ್ಲಿ ಇಬ್ರಾಹಿಂ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಇಬ್ರಾಹಿಂ ಸೋಲು ಕಂಡಿದ್ದರು.ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ. ಸಿಎಂ ಇಬ್ರಾಹಿಂ ಪ್ರಧಾನಿಯನ್ನು ಹುಚ್ಚನಿಗೆ ಹೋಲಿಸುತ್ತಿದ್ದಂತೆ ಭಾರೀ ಟೀಕೆ ಕೇಳಿ ಬಂದಿತ್ತು.ತಮ್ಮ ಹೇಳಿಕೆಯ ಮೂಲಕ ಜನರಿಂದ ಆಯ್ಕೆಯಾದ ಪ್ರಧಾನಿಗೆ ಇಬ್ರಾಹಿಂ ಅವಮಾನಿಸಿದ್ದಾರೆ. ಜತೆಗೆ ಸವಿತಾ ಸಮಾಜಕ್ಕೂ ಅವಮಾನ ಮಾಡಿದ್ದಾರೆ. ಇನ್ನು ಸಿ ಎಂ ಇಬ್ರಾಹಿಂ ರವರು ದೇಶದ ಪ್ರಧಾನಿಯ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವೂ ಇಲ್ಲದೆ ಮೋದಿಯವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇನ್ನು ಸಿ ಎಂ ಇಬ್ರಾಹಿಂ ರವರ ಭಾಷಣ ಅಲ್ಲಿ ನೆರೆದವರಿಗೆಲ್ಲ ಕಾಮಿಡಿಯಾಗಿ ಕಾಣಿಸಿದ್ರು ಒಬ್ಬ ನಾಯಕನಾಗಿ ದೇಶದ ಪ್ರಧಾನಿಯ ಬಗ್ಗೆ ಹೀಗೆ ಮಾತನಾಡುವುದು ಎಷ್ಟು ಸರಿ. ಈ ವೀಡಿಯೋ ಬಗ್ಗೆ ಇನ್ನಷ್ಟು ಮಾಹಿತಿ ಬೇಕು ಎಂದಾದಲ್ಲಿ ಮಿಸ್ ಮಾಡದೇ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!