By : Oneindia Kannada Video Team
Published : February 26, 2018, 10:58

ಬಾಲಿವುಡ್ ತಾರೆ ಶ್ರೀದೇವಿಗೆ ಕಾಂಗ್ರೆಸ್ ನಿಂದ ಅವಮಾನ

ಮೋಹಕ ತಾರೆ, ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿಯವರ ಅಕಾಲಿಕ ಸಾವಿನ ದುಃಖಕ್ಕೆ ಸಂತಾಪ ಸೂಚಿಸಿ, ವಿವಿಧ ಕ್ಷೇತ್ರದ ಗಣ್ಯರಿಂದ ಟ್ವೀಟ್ ಗಳು ಮಹಾಪೂರವೇ ಹರಿದು ಬಂದಿದೆ. ಭಾರತೀಯ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿರುವ ಸಂದರ್ಭದಲ್ಲಿ ದೇಶದ ಅತ್ಯಂತ ಪುರಾತನ ಪಕ್ಷ ಕೂಡಾ ಶ್ರೀದೇವಿ ಅವರ ಸಾವಿನ ಬಗ್ಗೆ ಟ್ವೀಟ್ ಮಾಡಿದೆ. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಟ್ವಿಟರ್ ಖಾತೆಯಿಂದ ನಟಿ ಶ್ರೀದೇವಿ ಸಾವಿಗೆ ಸಂತಾಪ ಸೂಚಿಸಿದ ಟ್ವೀಟ್ ನ ಬರೆದ ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಟ್ವೀಟ್‌ ನ ಕೊನೆಯ ಸಾಲುಗಳಲ್ಲಿ '2013 ರ ಯುಪಿಎ ಸರ್ಕಾರದ ಅವಧಿಯಲ್ಲಿ ನಟಿ ಶ್ರೀದೇವಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು' ಎಂದು ಬರೆಯಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!