By: Oneindia Kannada Video Team
Published : December 14, 2017, 12:43

ಬಿಜೆಪಿ ಈ ಬಾರಿಯೂ ಜಾದೂ ಮಾಡುವುದೆ ?

Subscribe to Oneindia Kannada

ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕಿಂತ, ಡಿಸೆಂಬರ್ 14ರಂದು ನಡೆಯುತ್ತಿರುವ ಎರಡನೇ ಹಂತದ ಮತದಾನ ಕಾಂಗ್ರೆಸ್ಸಿಗಿಂತ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ನಿರಾಳತೆಯನ್ನು ತರಲಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎರಡನೇ ಹಂತದಲ್ಲಿ, ಒಟ್ಟು 182 ಕ್ಷೇತ್ರಗಳಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕಳೆದ ಬಾರಿ, ಅಂದರೆ 2012ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ 52ರಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್ ಕೇವಲ 39 ಸ್ಥಾನಗಳನ್ನು ಗಳಿಸಲು ಯಶಸ್ವಿಯಾಗಿತ್ತು.ಗುಜರಾತ್ ಕೇಂದ್ರ ಭಾಗದಲ್ಲಿ ಬಿಜೆಪಿ ಬಲಾಢ್ಯವಾಗಿದೆ. ನಲವತ್ತರಲ್ಲಿ ಕಾಂಗ್ರೆಸ್ 18ರಲ್ಲಿ ಮತ್ತು ಬಿಜೆಪಿ 20 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೂ, ಬಿಜೆಪಿಯ ಗೆಲುವಿನ ಅಂತರ ಕಾಂಗ್ರೆಸ್ ಕಳೆಗುಂದುವಂತೆ ಮಾಡಿತ್ತು. ಇದೇ ಕೇಂದ್ರ ಮತ್ತು ಉತ್ತರ ಭಾಗದಲ್ಲಿ ಡಿಸೆಂಬರ್ 14ರಂದು ಮತದಾನ ಜರುಗಲಿದೆ.ಕಣದಲ್ಲಿ 851 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ 22 ವರ್ಷಗಳಿಂದ ರಾಜ್ಯಭಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಮತ್ತೆ ಅಧಿಕಾರ ಮರಳಿ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಭಾರೀ ಪೈಪೋಟಿ ನೀಡಲಿದೆ ಎಂದು ಹಲವಾರು ಸಮೀಕ್ಷೆಗಳಿಂದ ತಿಳಿದುಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!