By : Oneindia Kannada Video Team
Published : November 04, 2017, 04:50

ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ವಿಫಲ?

ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆ ಮುಂದುವರೆದಿದೆಯಾದರೂ ಮೊದಲ ದಿನ ಆದ ಕಹಿ ಅನುಭವಗಳು ಪಕ್ಷದ ನಾಯಕರಿಗೆ ಇರಿಸುಮುರಿಸನ್ನುಂಟು ಮಾಡಿದ್ದು ಅದರಿಂದ ಹೊರಬರಲು ಸಾಧ್ಯವಾಗಿಲ್ಲ.
ಯಾತ್ರೆಯ ಆರಂಭ ನಿರೀಕ್ಷಿತ ಮಟ್ಟದಲ್ಲಿ ನಡೆಯದಕ್ಕೆ ಈಗ ಕಾರಣರಾರು ಎಂಬ ಪ್ರಶ್ನೆಗೆ ಪಕ್ಷದ ಕೆಲವು ನಾಯಕರು ಯಾತ್ರೆಯ ಮುಖ್ಯ ಸಂಚಾಲಕಿ ಶೋಭಾ ಕರಂದ್ಲಾಜೆ ಹಾಗೂ ದಕ್ಷಿಣ ಕರ್ನಾಟಕ ಉಸ್ತುವಾರಿ ಹೊತ್ತಿರುವ ಆರ್.ಅಶೋಕ್ ಅವರತ್ತ ಬೊಟ್ಟು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.ಶೋಭಾ ಕರಂದ್ಲಾಜೆ ಮತ್ತು ಆರ್ ಅಶೋಕ್ ನಡುವೆ ಸಮನ್ವಯ ಮತ್ತು ಸಂವಹನದ ಕೊರತೆ, ಪಕ್ಷದ ನಾಯಕರನ್ನು ಕಡೆಗಣಿಸಿದ್ದು, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಬದಿಗೆ ಸರಿಸಿದ್ದು, ಬಹಳಷ್ಟು ನಾಯಕರ ಸಲಹೆ ಪಡೆಯದಿರುವುದು ವೈಫಲ್ಯತೆ ಕಾಣಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.ಇನ್ನು ನಿನ್ನೆ ತುರುವೇಕೆರೆಯ ಬಾಣಸಂದ್ರದಲ್ಲಿ ನಡೆದ ಯಾತ್ರೆಯಲ್ಲಿ ಕೆಲವು ಅಹಿತಕರ ಘಟನೆಗಳು ಕೂಡ ನಡೆದವು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!