By : Oneindia Kannada Video Team
Published : December 07, 2017, 10:59

ಗುಜರಾತ್: ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಅಹಮದಾಬಾದ್, ಡಿಸೆಂಬರ್ 6: ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಟೈಮ್ಸ್ ನೌ - ವಿಎಂಆರ್ ಸಮೀಕ್ಷೆ ಹೇಳಿದೆ. ಇಂಡಿಯಾ ಟಿವಿ ವಿಎಂಆರ್ ಸಮೀಕ್ಷೆ: ಬಿಜೆಪಿಗೆ 106-116 ಸೀಟುಗಳು ಪಕ್ಕಾ! ಟೈಮ್ಸ್ ನೌ ಜನಾಭಿಪ್ರಾಯದ ಪ್ರಕಾರ ಬಿಜೆಪಿ ಗುಜರಾತ್ ನಲ್ಲಿ 111 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು ಹಿಂದಿನ ಬಾರಿಗಿಂತ 7 ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ ಬಿಜೆಪಿ ಶೇಕಡಾ 3 ಮತಗಳನ್ನು ಕಳೆದುಕೊಳ್ಳಲಿದೆ ಮತ್ತು ಕಾಂಗ್ರೆಸ್ ಶೇಕಡಾ 1 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಒಟ್ಟಾರೆ ಈ ಬಾರಿ ಕಾಂಗ್ರೆಸ್ ಗಿಂತ ಶೇಕಡಾ 5 ಮತಗಳನ್ನು ಬಿಜೆಪಿ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು ಸುಲಭ ಜಯ ಸಾಧಿಸಲಿದೆ.ನವೆಂಬರ್ 23ರಿಂದ ನವೆಂಬರ್ 30ರ ನಡುವೆ ಈ ಸಮೀಕ್ಷೆ ನಡೆಸಲಾಗಿದ್ದು 6000 ಜನರು ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!