By : Oneindia Kannada Video Team
Published : January 12, 2018, 06:37

ದಿನೇಶ್ ಗುಂಡೂರಾವ್ ಹಾಗು ಮುಖ್ಯಮಂತ್ರಿಗಳ ಮೇಲೆ ಮಾನನಷ್ಟ ಮೊಖದ್ದಮೆ ಹಾಕಿದ ಬಿಜೆಪಿ

ದಿನೇಶ್ ಗುಂಡೂರಾವ್ ಅವರು ರಾಜ್ಯದಂತ ಪ್ರತಿಭಟನೆ ಮಾಡುವಾಗ ಮಾಧ್ಯಮದವರೊಂದಿಗೆ ಮಾತನಾಡಿದ್ದರು . ಬಿ ಜೆ ಪಿ ಯವರ ಹಿಂದುತ್ವದ ನಡೆ ನುಡಿಯನ್ನು ಖಂಡಿಸಿ ರಾಜ್ಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ . ಮಾಧ್ಯಮದೊಂದಿಗೆ ದಿನೇಶ್ ಗುಂಡೂರಾವ್ ಅವರು ಬಿ ಜೆ ಪಿ ಯವರು ಉಗ್ರಗಾಮಿಗಳು ಎಂದು ನುಡಿದರು . ಇನ್ನೊಂದು ಕಡೆ ಮುಖ್ಯಮಂತ್ರಿಯವರು ಬಿ ಜೆ ಪಿ ಯವರ ನಡೆ ನುಡಿಯನ್ನು ಖಂಡಿಸಿ ಅವರಿಗೆ ಮಾನವೀಯತೆ ಇಲ್ಲವೆಂದು ಮಾಧ್ಯಮದ ಮುಂದೆ ಹೇಳಿದ್ದಾರೆರು . ಈ ಎರೆಡು ಹೇಳಿಕೆಗಳ ಬಗ್ಗೆ ಮಾಳವಿಕ ಹಾಗು ಬಿಜೆಪಿಯ ಹಿರಿಯ ನಾಯಕರು ಪ್ರತಿಕ್ರಿಯಿಸಿದ್ದರು . ಅಲ್ಪ ಸಂಖ್ಯಾತರ ಕೆಲವೇ ಕೆಲವು ಮತಗಳಿಗಾಗಿ ಹೀಗೆ ದಿನೇಶ್ ಗುಂಡೂರಾವ್ ಹಾಗು ಈ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ರೀತಿ ಖಂಡಿನೀಯ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಗುಡುಗಿದ್ದರು . ಇಂದು ಅವರೆಲ್ಲ ಕಮಿಶನರ್ ಖಚೇರಿಗೆ ತೆರಳಿ ದಿನೇಶ್ ಗುಂಡೂರಾವ್ ಹಾಗು ಮುಖ್ಯಮಂತ್ರಿಗಳ ಮೇಲೆ ಮಾನನಷ್ಟ ಮೊಖದ್ದಮೆ ಹಾಕಿದ್ದಾರೆ . ಹಾಗು FIR ಗೆ ಮನವಿ ಮಾಡಿದ್ದಾರೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!