By: Oneindia Kannada Video Team
Published : December 28, 2017, 04:03

ಯಡಿಯೂರಪ್ಪನವರಿಗೆ ಬಾರಿ ಮುಖಭಂಗವಾಗಿದೆ ದಿನೇಶ್ ಗುಂಡೂರಾವ್ ಸಂದರ್ಶನ

Subscribe to Oneindia Kannada

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಬೆಂಗಳೂರಿನ ಗಾಂಧಿನಗರ ಕ್ಷೇತ್ರವನ್ನು 2004ರಿಂದ ಅಂದರೆ ಸತತವಾಗಿ ಮೂರು ಬಾರಿ ಪ್ರತಿನಿಧಿಸುತ್ತಿದ್ದಾರೆ. ನಮ್ಮ ಸರಕಾರದ ಸಾಧನೆಯೇ ನಮಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಅಸ್ತ್ರ ಎನ್ನುವುದು ದಿನೇಶ್ ಅಭಿಮತ.ಸಿದ್ದರಾಮಾಯ್ಯ ಮತ್ತು ಪರಮೇಶ್ವರ್ ನೇತೃತ್ವದಲ್ಲಿ ಸಾಗುತ್ತಿರುವ ಎರಡು ಯಾತ್ರೆ, ಕರಾವಳಿಯಲ್ಲಿನ ಅಶಾಂತಿ, ಜ್ಯೋತಿಷ್ಯದ ಬಗ್ಗೆ ದಿನೇಶ್ ಗುಂಡೂರಾವ್, 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನ್ನಾಡಿದ್ದಾರೆ. ಅವರ ಸಂದರ್ಶನದ ಮುಂದುವರಿದ ಭಾಗ. ಜನರನ್ನು ತಲುಪಲು ಸೋಶಿಯಲ್ ಮಿಡಿಯಾ ಸರಿಯಾದ ವೇದಿಕೆನಾ?
ದಿನೇಶ್: ಹೌದು, ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಸುಳ್ಳಿನ ಪ್ರಚಾರ ಹೆಚ್ಚಾಗುತ್ತಿರುವುದು ವಿಷಾದನೀಯ. ಹೊನ್ನಾವರದ ಪರೇಶ್ ಮೆಸ್ತ ಸಾವಿನ ವಿಚಾರವನ್ನೇ ನೋಡಿ, ಪೋಸ್ಟ್ ಮಾರ್ಟಂ ವರದಿ ಬರುವ ಮುನ್ನವೇ, ಏನೆಲ್ಲಾ ಸೋಶಿಯಲ್ ಮಿಡಿಯಾದಲ್ಲಿ ಪ್ರಚಾರವಾಯಿತು? ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆಯವರೂ ವರದಿ ಬರುವ ಮುನ್ನವೇ ಸುಳ್ಳು ಟ್ವೀಟ್ ಮಾಡಿದ್ದು ಎಲ್ಲರಿಗೂ ಗೊತ್ತು. ಈ ರೀತಿಯ ಮೆಸೇಜ್ ನಿಂದ, ಜನ ಆ ಕ್ಷಣದಲ್ಲಿ ಉದ್ವೇಗಕ್ಕೊಳಗಾಗುತ್ತಾರೆ. ಹಾಗಾಗಿ, ಅಶಾಂತಿ ಉಂಟಾಗುತ್ತದೆ, ತಪ್ಪು ಮಾಡುತ್ತಾರೆ. ಅದನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕು. ಜನರು ಮೊಬೈಲ್ ಫೋನ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸುಧೃಡವಾದ ಸೋಶಿಯಲ್ ಮಿಡಿಯಾ ಟೀಂ ಅನ್ನು ಸಿದ್ದಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!