By : Oneindia Kannada Video Team
Published : November 27, 2017, 12:35

ಬಿಜೆಪಿ ಗೆಲುವಿನ ಮೇಲೆ ಸಾವಿರಾರು ಕೋಟಿ ರು ಬೆಟ್ಟಿಂಗ್!

ಅಹಮದಾಬಾದ್, ನವೆಂಬರ್ 27: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಕಾಣಲು ಯತ್ನಿಸುತ್ತಿರುವ ಬಿಜೆಪಿ ಪರ ಬುಕ್ಕಿಗಳು ಕೂಡಾ ನಿಂತಿದ್ದಾರೆ. ಗುಜರಾತಿನಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಲಿದೆ ಎಂದು ಬುಕ್ಕಿಗಳು ಸಾವಿರಾರು ಕೋಟಿ ರು ಬೆಟ್ಟಿಂಗ್ ಕಟ್ಟಿರುವ ಸುದ್ದಿ ಬಂದಿದೆ.ಬೆಟ್ಟಿಂಗ್ ಅಕ್ರಮವಾಗಿದ್ದರೂ ಬಿಜೆಪಿ ಪರ ಬುಕ್ಕಿಗಳು ಬೆಟ್ಟಿಂಗ್ ನಡೆಸುತ್ತಿದ್ದಾರೆ. ಸದ್ಯದ ರೇಟಿಂಗ್ ಪಟ್ಟಿಯಂತೆ ಬಿಜೆಪಿ ಗೆಲುವಿಗೆ 1 ರು ಗೆ 1.25ರಂತೆ ಟ್ರೆಂಡ್ ನಡೆಯುತ್ತಿದೆ.ಇದೇ ರೀತಿ ಕಾಂಗ್ರೆಸ್ ಗೆದ್ದರೆ 1 ರುಗೆ 2 ರು ನಂತೆ ಬೆಟ್ಟಿಂಗ್ ರೇಟ್ ಇದೆ. ನವೆಂಬರ್ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಮೇಲೆ 1 ರು ಗೆ 7ರು ನಂತೆ ಇತ್ತು. ಆದರೆ, ಈಗ ಕಾಂಗ್ರೆಸ್ಸಿನ ಪ್ರಚಾರದ ಭರಾಟೆ ನೋಡಿದ ಮೇಲೆ ಕಾಂಗ್ರೆಸ್ ಬೆಲೆ ಹೆಚ್ಚಳವಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಕೊನೆ ಕ್ಷಣದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ಮತ್ತೊಮ್ಮೆ ಮೋದಿ ಮಾತಿಗೆ ಜನತೆ ತಲೆದೂಗುತ್ತಿದ್ದು, ಬಿಜೆಪಿ ಪರ ಅಲೆ ಎದ್ದಿದೆ. ಬುಕ್ಕಿಗಳ ಪ್ರಕಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವು ತಪ್ಪಿಸಲು ಸಾಧ್ಯವಿಲ್ಲ. ವಿಜಯ್ ರೂಪಾಣಿ ನೇತೃತ್ವದ ಬಿಜೆಪಿ ಈ ಬಾರಿ 118 ಸ್ಥಾನಗಳನ್ನು ಗೆಲ್ಲಲ್ಲಿದೆ (2012ರಲ್ಲಿ 119). ಮತ್ತೊಂದು ಬುಕ್ಕಿಗಳ ತಂಡದ ಪ್ರಕಾರ ಬಿಜೆಪಿಗೆ 100 ಸ್ಥಾನ ಲಭಿಸಬಹುದು. ಕಾಂಗ್ರೆಸ್ಸಿಗೆ 80 ಸೀಟು ಸಿಗುವ ಸಾಧ್ಯತೆಯಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!