By: Oneindia Kannada Video Team
Published : December 06, 2017, 04:13

ಓಲಾ ಕ್ಯಾಬ್ ಡ್ರೈವರ್ ನಿಂದ ಬೆಂಗಳೂರಿನ ಯುವತಿಗೆ ಕಿರುಕುಳ

Subscribe to Oneindia Kannada

ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆ ಮತ್ತೆ ಕೆಟ್ಟ ವಿಷಯಕ್ಕೆ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಓಲಾ ಕ್ಯಾಬ್ ಚಾಲಕ ರಾಜಶೇಖರ್ ರೆಡ್ಡಿ ಎನ್ನುವಾತ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನೊಂದ ಯುವತಿ ಓಲಾ ಕ್ಯಾಬ್ ಕಂಪನಿಗೆ ಚಾಲಕ ರಾಜಶೇಖರ್ ರೆಡ್ಡಿ ವಿರುದ್ಧ ದೂರು ನೀಡಿದ್ದಾಳೆ.ಸೋಮವಾರ ಇಂದಿರಾನಗರದಿಂದ ಕೋರಮಂಗಲಕ್ಕೆ ತೆರಳುತ್ತಿದ್ದ ವೇಳೆ ಓಲಾ ಚಾಲಕ ರಾಜಶೇಖರ್ ರೆಡ್ಡಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.ಅಷ್ಟೇ ಅಲ್ಲದೇ ಕಾರ್ ಅನ್ನು ರಸ್ತೆ ಪಕ್ಕಕ್ಕೆ ಹಾಕಿ ಯುವತಿಯ ಮೈ ಕೈ ಮುಟ್ಟಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕಾರ್ ನ ಕಿಟಕಿ ಇಳಿಸಿ ಕೂಗಿಕೊಂಡಿದ್ದಾಳೆ. ಭಯಗೊಂಡ ರಾಜಶೇಖರ್ ರೆಡ್ಡಿ ಯುವತಿಯನ್ನು ರಸ್ತೆ ಪಕ್ಕದಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!