By : Oneindia Kannada Video Team
Published : October 26, 2017, 02:30

ಬೆಂಗಳೂರಿನ ಮದ್ದೇವಣಾಪುರ ಮಠದ ಸ್ವಾಮೀಜಿಯ ಪುತ್ರನ ರಾಸಲೀಲೆ ಬಯಲು

ಯಲಹಂಕದ ಮದ್ದೇವಣಾಪುರ ಮಠದ ಸ್ವಾಮೀಜಿಯ ಪುತ್ರನ ರಾಸಲೀಲೆಯ ವಿಡಿಯೋ ಬಯಲಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಮದ್ದೇವಣಾಪುರ ಮಠದ ಪೀಠಾಧಿಪತಿ ಶೀವಾಚರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಇದೀಗ ದಯಾನಂದನ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಮಠ ಬಿಟ್ಟು ತೆರಳಿ ಬೇರೆ ಸಭ್ಯ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ವಿಷಯ ಹರುಡುತ್ತಿದ್ದಂತೆಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಮಠದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರ ಕಾಮ ಪುರಾಣ ಬಯಲಾಗಿದೆ. ಸ್ವಾಮೀಜಿಯು ಮಹಿಳೆಯೊಬ್ಬಳ ಜೊತೆ ಪಲ್ಲಂಗದಾಟ ನಡೆಸುತ್ತಿರುವ ಸಿಡಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸ್ವಾಮೀಜಿ ಮಠದಿಂದ ಪರಾರಿಯಾಗಿದ್ದಾರೆ. ಮಠದ ಭಕ್ತರು, ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು , ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಸ್ವಾಮೀಜಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!