By : Oneindia Kannada Video Team
Published : March 06, 2018, 05:31

ಬೆಂಗಳೂರಿನ ಮಾಚೋಹಳ್ಳಿ ಕ್ರಾಸ್ ಬಳಿಯ ಚಿನ್ನದಂಗಡಿಯಲ್ಲಿ ದರೋಡೆ

ಲಾಂಗು ಮಚ್ಚು ತೋರಿಸಿ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ನಗರದ ಹೊರವಲಯದ ಮಾಚೋಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಲೆಗೆ ಹೆಲ್ಮೆಟ್ ಧರಿಸಿ ಕೈಯಲ್ಲಿ ಲಾಂಗುಗಳನ್ನು ಹಿಡಿದ ಮೂವರು ಮಾಚೋಹಳ್ಳಿಯ ಕ್ರಾಸ್‌ನಲ್ಲಿರುವ ಅಂಬೆ ಜ್ಯುಯೆಲರ್ಸ್‌ಗೆ ಪ್ರವೇಶಿಸಿ, ಅಂಗಡಿಯಲ್ಲಿ ಇದ್ದ ಇಬ್ಬರು ಗ್ರಾಹಕರನ್ನು ಹೆದರಿಸಿದ್ದಾರೆ. ದರೋಡೆಗೆ ಪ್ರತಿರೋಧ ತೋರಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿರುವ ಚಿನ್ನಾಭರಣ ದೋಚಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!