By: Oneindia Kannada Video Team
Published : October 30, 2017, 05:28

ಬೆಂಗಳೂರು : ಬ್ರಿಗೇಡ್ ರಸ್ತೆಯಲ್ಲಿ ಜಾರಿಗೆ ಬಂತು ಲೇಡಿ ಡ್ರೈವರ್ ಸೌಲಭ್ಯ

Subscribe to Oneindia Kannada

ಬೆಂಗಳೂರಿನ ಬ್ರಿಗೇಡ್ ರಸ್ತೆಯ ವಾಹನ ನಿಲುಗಡೆ ಸ್ಥಳದಲ್ಲಿ ಮಹಿಳೆಯರ ಕಾರುಗಳಿಗೆ ಶೇ 20ರಷ್ಟು ಮೀಸಲು ಸಿಗಲಿದೆ. ಈ ವ್ಯವಸ್ಥೆಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಭಾನುವಾರ ಚಾಲನೆ ನೀಡಿದ್ದಾರೆ. ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಶೇ 20ರಷ್ಟು ಮೀಸಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಪಾರ್ಕಿಂಗ್‌ಗಾಗಿ ಕಿ.ಮೀ.ಗಟ್ಟಲೆ ನಡೆಯುವುದು ತಪ್ಪಲಿದೆ. ಬಿಬಿಎಂಪಿಯ ನೂತನ ಯೋಜನೆ ಇದಾಗಿದೆ...ಈ ವ್ಯವಸ್ಥೆಗೆ ಮೇಯರ್ ಸಂಪತ್ ರಾಜ್ ಮತ್ತು ಶಾಂತಿನಗರ ಶಾಸಕ ಹ್ಯಾರೀಸ್ ಭಾನುವಾರ ಚಾಲನೆ ನೀಡಿದ್ದಾರೆ. ಮಹಿಳೆಯರು ಡ್ರೈವಿಂಗ್ ಮಾಡಿಕೊಂಡು ಬಂದ ಕಾರುಗಳಿಗೆ ಮಾತ್ರ ನಿಲುಗಡೆಯಲ್ಲಿ ಮೀಸಲಾತಿ ಸಿಗಲಿದೆ. ಗರಿಷ್ಠ 2 ಗಂಟೆಗಳ ಕಾಲ ವಾಹನ ನಿಲುಗಡೆ ಮಾಡಲು ಅವಕಾಶ ನೀಡಲಾಗಿದೆ...ಬಿಬಿಎಂಪಿ ಮುಂದಿನ ದಿನಗಳಲ್ಲಿ ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಇರುವ ರಸ್ತೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿದೆ. 'ಹಂತ-ಹಂತವಾಗಿ ಎಲ್ಲಾ ರಸ್ತೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ' ಎಂದು ಮೇಯರ್ ಹೇಳಿದ್ದಾರೆ...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!