By: Oneindia Kannada Video Team
Published : January 20, 2018, 12:01

ಬೆಳ್ಳಂದೂರು ಕೆರೆಗೆ ಬೆಂಕಿ

Subscribe to Oneindia Kannada

ಬೆಳ್ಳಂದೂರು ಕೆರೆಗೆ ನಿನ್ನೆ ಹತ್ತಿಕೊಂಡಿದ್ದ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೂ ಪೂರ್ಣ ಬೆಂಕಿ ಆರಿಲ್ಲ, ಕೆರೆ ಸುತ್ತ ಮುತ್ತ ದಟ್ಟ ಹೊಗೆ ತುಂಬಿಕೊಂಡಿದೆ.

ಮುಂಜಾನೆವರೆಗೂ ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಳೆತ್ತರ ಕೆನ್ನಾಲಗೆ ಚಾಚುತ್ತಿದ್ದ ಕೆರೆಯ ಬೆಂಕಿಯನ್ನು ಕಡಿಮೆಗೊಳಿಸಿದ್ದಾರೆ, ಆದರೆ ಇನ್ನೂ ಕಾರ್ಯಾಚರಣೆ ಸಂಪೂರ್ಣ ಮುಗಿದಿಲ್ಲ, ಕೆರೆ ಒಡಲು ಸಂಪೂರ್ಣ ಶಾಂತವಾಗುವವರೆಗೂ ಅಗ್ನಿಶಾಮಕ ದಳ ಸಿಬ್ಬಂದಿ ತಮ್ಮ ಕಾರ್ಯ ಮುಂದುವರೆಸಿಲಿದ್ದಾರೆ.

ನಗರದ ಅತ್ಯಂತ ಕಲುಷಿತ ಕೆರೆಯೆಂಬ ಕುಖ್ಯಾತಿಯ ಬೆಳ್ಳಂದೂರು ಕೆರೆಗೆ ನಿನ್ನೆ ಮಧ್ಯಾಹ್ನ ಬೆಂಕಿ ಹತ್ತಿಕೊಂಡಿತ್ತು, ರಾತ್ರಿಯ ವೇಳೆಗೆ ಬೆಂಕಿ ಉಲ್ಬಣಿಸಿ ಸುತ್ತಮುತ್ತಲ ಪ್ರದೇಶದ ಜನ ಆತಂಕಕ್ಕೊಳಗಾಗುವಂತಾಗಿತ್ತು. ಕೆರೆಗೆ ಬೆಂಕಿ ಬಿದ್ದ ಬಗ್ಗೆ ರಕ್ಷಣಾ ಇಲಾಖೆ ನಡುವೆ ಕೆಸರೆರಚಾಟ ನಡೆದಿದ್ದು, ಒಬ್ಬರು ಮತ್ತೊಬ್ಬರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ಮಾಡಲಾಗಿದೆ, ಇದು ನಗರವಾಸಿಗಳ ಬೇಸರಕ್ಕೆ ಕಾರಣವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!