• search
By : Oneindia Kannada Video Team
Published : December 12, 2017, 03:19

ಬಾಗಲಕೋಟೆಯಲ್ಲಿ ಸಚಿವರೆದುರೇ ಮಂಗನ ಪೀಕಲಾಟ

ಸಚಿವರೆದುರೇ ಸಭೆಯಲ್ಲಿ ಮಂಗನ ಪೀಕಲಾಟ. ಕೂಡಲಸಂಗಮದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆತಂಕ ಮೂಡಿಸಿದ ಮಂಗಗಳು. ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟದ ಸಮಿತಿ ಸಭೆ. ಸಚಿವರಿಗಾಗಿ ಇಟ್ಟ ಬಿಸ್ಕಿಟ್ ಸಹಿತ ತಿನಿಸು ಕೊಂಡೊಯ್ದ ಮಂಗ.ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂತ್ರಸ್ತರ ಭೂಮಿ ಬೆಲೆ ನಿಗದಿಗಾಗಿ ನಡೆಯುತ್ತಿರು ಸಭೆ. ಸಭೆಯ ಬ್ಯಾನರ್ ಮೇಲೆಯೂ ಕುಳಿತ ಮಂಗಗಳು. ಮಂಗಗಳನ್ನ ನಿಯಂತ್ರಿಸಲು ಹರಸಾಹಸ ಪಡುತ್ತಿರೋ ಸಿಬ್ಬಂದಿ. ಸಭೆಯಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಶರಣಪ್ರಕಾಶ ಪಾಟೀಲ, ಎಚ್.ಕೆ.ಪಾಟೀಲ, ಕೆಪಿಸಿಸಿ ಕಾಯಾ೯ದ್ಯಕ್ಷ ಸೇರಿದಂತೆ ಹಲವು ಗಣ್ಯರು ಭಾಗಿ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದ ಸಭೆ.ಸಭೆ ಆರಂಭವಾಗುತ್ತಿದ್ದಂತೆ ಎರಡು ಮಂಗಗಳು ವೇದಿಕೆ ಮೇಲೇರಿ ಸಚಿವರ ಬಿಸ್ಕತ್ ಹಾಗೂ ತಿನಿಸುಗಳನ್ನ ತೆಗೆದುಕೊಂಡವು..ಇದ್ರಿಂದ ಮೇಲಿದ್ದ ಸಚಿವರು ಗೊಂದಲಕ್ಕೆಡಾದ್ರು. ಇನ್ನು ಮಂಗಗಳು ನುಗ್ಗುತ್ತಿದ್ದಂತೆ ಅಲ್ಲಿದ್ದ ಸಿಬ್ಬಂಧಿ ವರ್ಗಕ್ಕೆ ಕೆಲವು ಕ್ಷಣಗಳು ಗೊಂದಲ ಉಂಟಾಯಿತು‌. ಅಲ್ಲದೇ ಪೊಲೀಸರು ತಮ್ಮ ಕೋಲಿನಿಂದ ಮಂಗಗಳನ್ನ ಓಡಿಸಲು ಮುಂದಾದ್ರು. ಇದ್ರಿಂದ ಕ್ಷಣ ಕಾಲ ವೇಧಿಕೆ ಮೇಲೆ ನೆರದಿದ್ದವರಿಗೆ ಮುಜುಗರ ಉಂಟುಮಾಡಿದ್ದು ಸುಳ್ಳಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more