By: Oneindia Kannada Video Team
Published : December 26, 2017, 12:45

ಬಿ ಎನ್ ವಿಜಯ್ ಕುಮಾರ್ ಬಿಜೆಪಿ ಎಂಎಲ್ಎ ಸಂದರ್ಶನ : ಬಿಜೆಪಿಗೆ ಮಹದಾಯಿ ತಿರುಗುಬಾಣವಾಗುತ್ತಾ?

Subscribe to Oneindia Kannada

ಬೆಂಗಳೂರು ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಿ ಎನ್ ವಿಜಯ್ ಕುಮಾರ್, ಮೂಲತ: ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಹನ್ನೆರಡು ವರ್ಷ ಬಿಜೆಪಿ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿರುವ ವಿಜಯ್ ಕುಮಾರ್, ಬೆಂಗಳೂರು ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.ಬೆಂಗಳೂರು ಹೊರವಲಯದ ನೆಲಮಂಗಲ ಮೂಲದ ವಿಜಯ್ ಕುಮಾರ್, ಸತತವಾಗಿ ಎರಡು ಬಾರಿ ಜಯನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಸ್ವಚ್ಚ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಹೆಗ್ಗಳಿಕೆಯನ್ನು ಹೊಂದಿರುವ ವಿಜಯ್ ಕುಮಾರ್ ಅವರ ಜೊತೆಗಿನ ಸಂದರ್ಶನದ ಮುಂದುವರಿದ ಆಯ್ದ ಭಾಗ,ಪ್ರ: ಮಹದಾಯಿ ಯೋಜನೆ, ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಿರುಗುಬಾಣವಾಗಲಿದೆಯಾ?
ವಿಜಯ್ ಕುಮಾರ್: ಮಹದಾಯಿ ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ಎಲ್ಲರಿಗೂ ಗೊತ್ತು. ಜಾತಿ ಮತ್ತು ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲದಕ್ಕೂ ಬಿಜೆಪಿಯನ್ನು ದೂರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದೆ. ಜನ ಇದನ್ನೆಲ್ಲಾ ಅರಿತಿದ್ದಾರೆ, ನಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!