By : Oneindia Kannada Video Team
Published : November 10, 2017, 04:02

ಬಿಜೆಪಿ ನಾಯಕರಿಂದಲೇ ಟಿಪ್ಪು ಜಯಂತಿಗೆ ಜೈಕಾರ..ಧಿಕ್ಕಾರ..?

ಕಳೆದ ಎರಡು ವರ್ಷದ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಜಾರಿಗೆ ತಂದಿತ್ತು. ಅಂದಿನಿಂದ ಟಿಪ್ಪು ಜಯಂತಿಗೆ ಬಿಜೆಪಿ ವಿರೋಧಿಸುತ್ತಾ ಬಂದಿದೆ. ಅಷ್ಟೇ ಅಲ್ಲದೇ ಕಳೆದ ಟಿಪ್ಪು ಜಯಂತಿ ದಿನದಂದು ಮಡಿಕೇರಿಯಲ್ಲಿ ಕೋಮು ಗಲಭೆಯಲ್ಲಿ ಸಾವು-ನೋವುಗಳು ನಡೆದಿದ್ದವು. ಇಷ್ಟೇಲ್ಲ ಆದರೂ ಬಿಜೆಪಿ ಪ್ರಮುಖ ನಾಯಕರೇ ಇದೀಗ ಟಿಪ್ಪು ಜಯಂತಿಗೆ ಜೈ ಎಂದಿರುವುದು ಎಷ್ಟು ಸರಿ ಎನ್ನುವುದು ಅಪ್ಪಟ ಬಿಜೆಪಿ ಕಾರ್ಯಕರ್ತರ ಮಾತು. ಟಿಪ್ಪು ಜಯಂತಿ ಮಾಡಿ ಎಲ್ಲವೂ ಆಗಿ ಕೈತೊಳಕೊಂಡ ಬಳಿಕ ನಾಯಕರು ತಮ್ಮ ಸ್ಪಷ್ಟನೆಗಳು ನೀಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಓಟ್ ಬ್ಯಾಂಕ್ ಗಾಗಿ ಸ್ಥಳೀಯ ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಳ್ಳಬಾರದು ಎಂಬ ದೃಷ್ಟಿಯಿಂದ ಕೆಲ ಬಿಜೆಪಿ ನಾಯಕರು ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!