By: Oneindia Kannada Video Team
Published : January 17, 2018, 07:05

ಶೃಂಗೇರಿಯಲ್ಲಿ ದೇವೇಗೌಡರ ಅತಿರುದ್ರ ಯಾಗ, ಎಂಬತ್ತರ ನಂತರ ರಾಜಕಾರಣ

Subscribe to Oneindia Kannada

ಶೃಂಗೇರಿಯಲ್ಲಿ ಅತಿ ರುದ್ರ ಯಾಗ ಮಾಡಿ ಮುಗಿಸಿದ್ದಾರೆ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು. ನಮಗೆ-ನಿಮಗೆಲ್ಲ ಹೋಮ ಅಂದರಷ್ಟೇ ಗೊತ್ತಿರುತ್ತದೆ. ಆದರೆ ಇದು ಯಾಗ. ಅಂದರೆ ಪ್ರಮಾಣದಿಂದಲೂ ಬಹಳ ಹೆಚ್ಚು. ಹಾಗೆ ನೋಡಿದರೆ ದೇವೇಗೌಡರಿಗೆ ಇರುವ ದೈವ ಭಕ್ತಿ- ಜ್ಯೋತಿಷ್ಯದ ಮೇಲಿನ ನಂಬಿಕೆ ಹೊಸತೇನಲ್ಲ. ಅವರ ನಂಬಿಕೆಯಿಂದ ನಮಗೆ ಯಾವುದೇ ತೊಂದರೆಯೂ ಇಲ್ಲ.


ನಮಗೆ ಪುರಾಣಗಳಲ್ಲಿ ಕೇಳಿ, ಬಾಯಿ ಪಾಠ ಆಗಿರುವ ಯಾಗಗಳು ಒಂದಷ್ಟಿವೆ. ಅಂದರೆ ಅಶ್ವಮೇಧ ಯಾಗ, ರಾಜಸೂಯ ಯಾಗ, ಪುತ್ರಕಾಮೇಷ್ಠಿ ಯಾಗಹೀಗೆ. ಈಚೆಗೆ ಡಿ.ಕೆ.ಶಿವಕುಮಾರ್ ಅವರು ಮಾಡಿದ ಚಂಡಿಕಾ ಯಾಗ ಹಾಗೂ ಅದಕ್ಕೂ ಬಹಳ ಮುನ್ನ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮಾಡಿಸಿದ ಆಯತ ಚಂಡಿಕಾ ಯಾಗಗಳು ಇತ್ತೀಚಿನ ದಿನಮಾನದಲ್ಲಿ ನಾವು ಸಾಕ್ಷಿಯಾದ ದೊಡ್ಡ ಮಟ್ಟದ ಯಾಗಗಳು.


ಎಂಬತ್ತು ವಯಸ್ಸು ದಾಟಿದರೂ ದೇವೇಗೌಡರ ಚುರುಕು ಸಾಮಾನ್ಯ ಅಲ್ಲ ಬಿಡಿ. ಶೃಂಗೇರಿಯಲ್ಲಿ ಯಾಗದಲ್ಲೂ ಭಾಗೀಯಾಗ್ತಾರೆ. ಅದೇ ವೇಳೆ ಇನ್ನೊಂದು ಕಡೆ ಪತ್ರಿಕಾಗೋಷ್ಠಿ ಹೀಗೆ. ಎಂಬತ್ತರ ವಯಸ್ಸು ದಾಟಿದ ಎಸ್ಸೆಂ ಕೃಷ್ಣ, ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ...ಇವರಿಗೆಲ್ಲ ಕಾಗದದ ಮೇಲೆ ವಯಸ್ಸಾಗಿದೆ ಅನ್ನೋದು ನಿಜ. ಆದರೆ ರಾಜಕೀಯದಲ್ಲಿ ಈಗಲೂ ತಮ್ಮ ಅಸ್ತಿತ್ವವನ್ನು ಹಾಗೇ ಉಳಿಸಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!