By : Oneindia Kannada Video Team
Published : November 02, 2017, 06:32

ಮಹಾಭಾರತದ ಅರಗಿನ ಅರಮನೆಯ ಉತ್ಖನನಕ್ಕೆ ಅಸ್ತು

ಮಹಾಭಾರತದಲ್ಲಿ ದುಷ್ಟ ಕೌರವರ ಕುತಂತ್ರಕ್ಕೆ ಬಲಿಯಾಗದೆ, ಕ್ಷಣಾರ್ಧದಲ್ಲಿ ಸುಟ್ಟುಹೋಗುವ ಅರಗಿನ ಮನೆ(ಲಾಕ್ಷಾಗೃಹ)ಯಿಂದ ಪಾಂಡವರು ದ್ರೌಪದಿಯ ಸಮೇತ ಹೇಗೆ ಪಾರಾದರು ಎಂಬುದು ರೋಚಕ ಅಧ್ಯಾಯ. ಲಕ್ಷಗೃಹ ಎಂದೂ ಕರೆಯಲಾಗುವ ಇದೇ ಅರಗಿನ ಮನೆ ಈಗಲೂ ಇದೆ ಎನ್ನುವ ಪ್ರದೇಶವನ್ನು ಉತ್ಖನನ ಮಾಡಲು ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆ ಅನುಮತಿ ನೀಡಿದೆ. ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದರೆನ್ನಲಾದ ಸುರಂಗ ಈಗಲೂ ಇದೆ. ಬಾಘಪಟ್ ಜಿಲ್ಲೆಯ ಬರ್ನಾವಾ ಎಂಬಲ್ಲಿ ಉತ್ಖನನ ನಡೆಯಲಿದ್ದು, ಈ ಉತ್ಖನನಕ್ಕಾಗಿ ಪುರಾತತ್ವ ತಜ್ಞರು, ಇತಿಹಾಸಕಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆಯ ಅಧಿಕಾರಿಗಳ ಪ್ರಕಾರ ಇದೇ ವರ್ಷ ಡಿಸೆಂಬರ್ ನಲ್ಲಿ ಉತ್ಖನನ ನಡೆಯಲಿದೆ. ಮೂರು ತಿಂಗಳು ಉತ್ಖನನ ನಡೆಯಲಿದೆ...ಬರ್ನಾವಾ ಎಂಬ ಹೆಸರು ಕೂಡ ವಾರಣಾವತ ಎಂಬ ಹೆಸರಿನ ಅಪಭ್ರಂಶವಾಗಿದೆ. ಮಹಾಭಾರತದ ಸಮಯದಲ್ಲಿ ಪಾಂಡವರು ಕೌರವರಿಂದ 5 ಹಳ್ಳಿಗಳನ್ನು ರಾಜ್ಯಭಾರ ನಡೆಸಲು ಕೇಳಿಕೊಂಡಿದ್ದರು. ಆ ಐದು ಹಳ್ಳಿಗಳಲ್ಲಿ ಒಂದು ಹಳ್ಳಿಯೇ ವಾರಣಾವತ ಅರ್ಥಾತ್ ಬರ್ನಾವಾ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!