By : Oneindia Kannada Video Team
Published : January 24, 2018, 12:29

ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯನವರದ್ದಲ್ಲ, ಮೋದಿ ಯೋಜನೆ ಎಂದ ಪ್ರಕಾಶ್ ಜಾವಡೇಕರ್

'ಅನ್ನಭಾಗ್ಯ' ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ವಾದಿಸುತ್ತಿದ್ದ ಬಿಜೆಪಿಯವರೀಗ ಮಾತು ಬದಲಿಸಿದ್ದಾರೆ. ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ ಜನಪ್ರಿಯ ಯೋಜನೆ ಎಂದು ಅರ್ಥವಾಗುತ್ತಿದ್ದಂತೆ ಇದು 'ಮೋದಿ ಯೋಜನೆ' ಎನ್ನುಲು ಶುರು ಮಾಡಿದ್ದಾರೆ.

ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯನವರದ್ದಲ್ಲ, ಮೋದಿ ಯೋಜನೆ ಎಂದ ಪ್ರಕಾಶ್ ಜಾವಡೇಕರ್

ಅನ್ನಭಾಗ್ಯ ಸಿದ್ದರಾಮಯ್ಯರ ಯೋಜನೆಯಲ್ಲ ಅನ್ನಭಾಗ್ಯ 'ಮೋದಿ ಭಾಗ್ಯ'ದಿಂದ ಬಂದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು

ಇಂದಿರಾ ಕ್ಯಾಂಟೀನ್, ಅನ್ನಭಾಗ್ಯಕ್ಕೆ ಕೇಂದ್ರದ ಕೊಡುಗೆ ಇದೆ. ರಾಜ್ಯದ 'ಅನ್ನಭಾಗ್ಯ ಯೋಜನೆ'ಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಆದರೆ ಸಿದ್ದರಾಮಯ್ಯ ಮಾತ್ರ ಅದನ್ನು ಉಚಿತವಾಗಿ ಕೊಡುವ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!