By: Oneindia Kannada Video Team
Published : December 29, 2017, 03:53

ಅನಿಲ್ ಅಂಬಾನಿ, ರಿಲಯನ್ಸ್ ಕಮ್ಯುನಿಕೇಷನ್ ಅಧ್ಯಕ್ಷರು : ಜಾತಕ ವಿಶ್ಲೇಷಣೆ

Subscribe to Oneindia Kannada

ಈ ದಿನ ರಿಲಯನ್ಸ್ ಕಮ್ಯೂನಿಕೇಷನ್ ನ ಅನಿಲ್ ಅಂಬಾನಿ ಅವರ ಜಾತಕ ವಿಶ್ಲೇಷಣೆ ಮಾಡಲಾಗುತ್ತಿದೆ. ಆ ಕಂಪೆನಿಯ ನಲವತ್ತೈದು ಸಾವಿರ ಕೋಟಿ ರುಪಾಯಿ ಸಾಲವನ್ನು ಆರು ಸಾವಿರ ಕೋಟಿಗೆ ಇಳಿಸಿಕೊಳ್ಳುತ್ತಾರೆ. ಕಂಪೆನಿಯ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅವರ ಕಂಪೆನಿಯ ಷೇರುಗಳಿಗೆ ಜೀವ ತುಂಬಿದೆ. ತಮ್ಮ ಆಸ್ತಿಯನ್ನು ಮಾರಿ, ಮುಂದಿನ ಮಾರ್ಚ್ ನೊಳಗೆ ಇಪ್ಪತ್ತೈದು ಸಾವಿರ ಕೋಟಿ ತೀರಿಸುವುದಾಗಿ ಹೇಳಿದ್ದಾರೆ. ಇನ್ನು ಚೀನಾ ಕಂಪೆನಿಯೊಂದು ಕೊಟ್ಟಿರುವ ಹತ್ತು- ಹನ್ನೊಂದು ಸಾವಿರ ಕೋಟಿ ರುಪಾಯಿ ಸಾಲವನ್ನು ಕೋರ್ಟ್ ನ ಹೊರಗೆ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲ ಸಕಾರಾತ್ಮಕ ಬೆಳವಣಿಗೆ ಎಂಬಂತೆ ಷೇರುದಾರರು ನೋಡುತ್ತಿದ್ದಾರೆ.ಆದರೆ, ಜನರಲ್ಲಂತೂ ಸಣ್ಣ ಅನುಮಾನವಿತ್ತು. ಅನಿಲ್ ಅಂಬಾನಿ ಕೂಡ ವಿಜಯ್ ಮಲ್ಯ ಅವರ ರೀತಿ ಏನಾದರೂ ಮಾಡಿಬಿಡ್ತಾರಾ ಎಂಬ ಗುಮಾನಿಯದು. ಆದರೆ ಯಾವಾಗ ಇಷ್ಟು ದೊಡ್ಡ ಪ್ರಮಾಣದ ಸಾಲ ತೀರಿಸಲು ಮುಂದಾದರೋ ಆಗ ಅವರ ಮೇಲಿನ ನಂಬಿಕೆಯನ್ನು ಮತ್ತೆ ತೋರಿಸುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!