By : Oneindia Kannada Video Team
Published : January 23, 2018, 06:24

ಅನಂತ್ ಕುಮಾರ್ ಹೆಗ್ಡೆ ದಲಿತರನ್ನ ನಾಯಿಗಳು ಎಂದು ಕರೆದಿದ್ಯಾಕೆ?

ಕೌಶಲ್ಯ ಅಭಿವೃದ್ಧಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ದಲಿತರನ್ನ ಬೊಗಳುವ ನಾಯಿಗಳೆಂದು ಕರೆಯುವ ಮೂಲಕ ಮತ್ತೊಂದು ವಿವಾದಕ್ಕೆ ಈಡಾಗಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಉದ್ಯೋಗ ಮೇಲಕ್ಕೆ ಆಗಮಿಸಿದ್ದ ಅನಂತ್ ಕುಮಾರ್ ಹೆಗ್ಡೆಯವರನ್ನ ದಲಿತ ಪ್ರತಿಭಟನಾಕಾರರು ತಡೆದು ನಿಲ್ಲಿಸಿದ್ದಾರೆ.

ಭಾರತದ ಸಂವಿಧಾನದ ಬಗೆಗಿನ ಹೆಗ್ಡೆಯವರ ಹಿಂದಿನ ಭಾಷಣವನ್ನ ವಿರೋಧಿಸಿ ಹೆಗ್ಡೆಯವರ ಕಾರನ್ನ ತಡೆದು ನಿಲ್ಲಿಸಿ ಘೋಷಣೆ ಕೂಗಿದ್ದಾರೆ. ನಂತರ ಮತ್ತೊಂದು ಘಟನೆಯಲ್ಲಿ, ಒಂದು ಸಭೆಯನ್ನ ಉದ್ದೇಶಿಸಿ ಹೆಗ್ಡೆಯವರು ಮಾತನಾಡುವಾಗ ಬೊಗಳೋ ನಾಯಿಗಳಿಗೆ ಹೆದರುವುದಿಲ್ಲ ಎಂಬ ಹೇಳಿಕೆ ದಲಿತರನ್ನ ಇನ್ನಷ್ಟು ರೊಚ್ಚಿಗೆಬ್ಬಿಸಿದೆ.

ಇದೀಗ ಅನಂತ್ ಕುಮಾರ್ ಹೆಗ್ಡೆಯವರ ವಿರುದ್ಧ ದಲಿತರು ಪ್ರತಿಭಟನೆ ನಡೆಸುತ್ತಿದ್ದು ಈ ಕೂದಲು ದಲಿತ ವಿರೋಧಿ ಅನಂತ್ ಕುಮಾರ್ ಹೆಗ್ಡೆಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗುತ್ತಾ ಪಿ-ರತಿಭಟನೆ ನಡೆಸುತ್ತಿದ್ದಾರೆ. ಇನ್ನಷ್ಟು ತಿಳಿಯಬೇಕೆಂದರೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!