By : Oneindia Kannada Video Team
Published : January 12, 2018, 06:00

ಡಿ ರೂಪ ಐಪಿಎಸ್ ರವರ ಸ್ಪೂರ್ತಿದಾಯಕ ಮಾತುಗಳು

ಡಿ ರೂಪ ಐಪಿಎಸ್ ರವರ ಹೆಸರು ಕೇಳಿದರೆ ಸಾಕು ಎಷ್ಟೋ ಜನರಿಗೆ ಎಲ್ಲಿಲ್ಲದ ಸ್ಪೂರ್ತಿ ಬರೋದಂತು ನಿಜ . ರೂಪ ಅವರು ಕರ್ನಾಟಕ ಕಂಡ ಮೊದಲ ಇಂಡಿಯನ್ ಪೊಲೀಸ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿರೋ ಮಹಿಳೆ . ೨೦೦೧ನೇ ಬ್ಯಾಚ್ ನಲ್ಲಿ ಈಕೆ ಐದನೇ ರಾಂಕ್ ಪಡೆದಿದ್ದರು . ಈಕೆ ಕೆಚ್ಚೆದೆಯ ನಿಷ್ಠಾವಂತ ಅಧಿಕಾರಿ . ಹಾಗೆಯೇ ಇವರು ಉತ್ತಮ ಮಾತುಗಾರ್ತಿಯೂ ಹೌದು . ಇತ್ತೀಚಿಗಷ್ಟೇ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜು ನಲ್ಲಿ ನಡೆದಂತ ಟೆಡ್ ಟಾಕ್ ಒಂದರಲ್ಲಿ ಈಕೆ ಮಾತನಾಡಿದ್ದಾರೆ . ದೇಶ ವಿದೇಶದ ಸಾಧಕರು ಪ್ರಪಂಚದೆಲ್ಲೆಡೆ ನಡೆಯುವ ಟೆಡ್ ಟಾಕ್ ಗಳಲ್ಲಿ ಜನರನ್ನು ಹುರಿದುಂಬಿಸಲು ಮಾತನಾಡುತ್ತಾರೆ . ಬೆಂಗಳೂರಿನಲ್ಲಿ ಡಿ ರೂಪ ಮಾತನಾಡಿರುವುದು ನೆರೆದಂತವರ ಸ್ಫೂರ್ತಿ ಹೆಚ್ಚಿಸಿದ್ದಂತೂ ನಿಜ . ಪೊಲೀಸ್ ಆಗಬೇಕು ಅಂದುಕೊಂಡವರಂತೂ ನೋಡಲೇ ಬೇಕಾದ ವಿಡಿಯೋ ಇದು .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!