By: Oneindia Kannada Video Team
Published : January 02, 2018, 02:36

ಕಾಂಗ್ರೆಸ್ ನಮ್ಮ ಟಾರ್ಗೆಟ್ ಆಗಬೇಕು ಎಂದು ಕರ್ನಾಟಕ ಬಿಜೆಪಿ ನಾಯಕರಿಗೆ ಸೂಚಿಸಿದ ಅಮಿತ್ ಶಾ

Subscribe to Oneindia Kannada

ಕರ್ನಾಟಕದಲ್ಲಿ ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕರ್ನಾಟಕ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.ಡಿ.31 ರಂದು ಬೆಂಗಳೂರಿನ ಯಲಹಂಕದ ರಾಯಲ್ ಆರ್ಕಿಡ್ ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದವು. 2018 ರ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಂತೆ ಈ ಸಂದರ್ಭದಲ್ಲಿ ಗಂಭೀರವಾಗೊ ಚರ್ಚೆ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಇನ್ನೂ ಒನ್ ಪ್ಲಸ್ ಒನ್ ಸ್ಟ್ರಾಟಜಿ ಜಾರಿಗೆ ಬಂದಿಲ್ಲ, ಏಕೆ? ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು."ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ನಾನು ಈ ಮೊದಲೇ ಸೂಚನೆ ನೀಡಿದ್ದೆ. ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ, ಏಕೆ? ಒಂದು ಸಣ್ಣ ಕೆಲಸವನ್ನೂ ಮಾಡದೆ, ಗೆಲ್ಲಬೇಕು ಎಂದರೆ ಹೇಗಾಗುತ್ತದೆ?" ಎಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!