• search
  • Live TV
By : Oneindia Video Kannada Team
Published : October 01, 2018, 02:48
Duration : 02:07

ಪ್ರವಾಸಿಗರಿಗಾಗಿ ಅಬ್ಬಿ ಫಾಲ್ಸ್ ತೆರೆದಿದೆ ಆದರೆ ಕೆಲವು ನಿಯಮಗಳಿವೆ

ಆಗಸ್ಟ್ ನಲ್ಲಿ ಸಂಭವಿಸಿದ ಜಲಪ್ರಳಯದಿಂದಾಗಿ ಎಲ್ಲೆಂದರಲ್ಲಿ ರಸ್ತೆಗಳು ಕುಸಿದು ಸಂಚಾರ ಬಂದ್‌ ಗೊಂಡ ಕಾರಣ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಜೊತೆಗೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿತ್ತು. ಮಡಿಕೇರಿ ಬಳಿಯ ಅಬ್ಬಿಫಾಲ್ಸ್ ಜಲಪಾತ ವೀಕ್ಷಿಸಲು ಹೆಚ್ಚಿನ ಜನ ಮುಗಿ ಬೀಳುತ್ತಾರೆ. ಈ ಜಲಪಾತವನ್ನು ನೋಡಲೆಂದೇ ಜನ ಬರುತ್ತಿದ್ದರು. ಆದರೆ ಇಲ್ಲಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಪ್ರವಾಸಿಗರ ಹಿತದೃಷ್ಠಿಯಿಂದ ಅಬ್ಬಿ ಜಲಪಾತ ಹಾಗೂ ಮಾಂದಲ್ ಪಟ್ಟಿಗೆ ತೆರಳದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಪ್ರವಾಸಿಗರಿಗೆ ಆ ನಿರ್ಬಂಧ ಇಲ್ಲ. ಅದರೂ ಕೆಲವು ಕಡೆ ಎಚ್ಚರವಹಿಸಬೇಕಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!