By : Oneindia Kannada Video Team
Published : January 13, 2018, 12:43

ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸಿನಿಂದಾಗಿ ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ

ಹಾಸನದ ಶಾಂತಿಗ್ರಾಮ ಕರೆಕೆರೆ ಎಂಬಲ್ಲಿ ಬಸ್ ವೊಂದು ಕೆರೆಗೆ ಉರುಳಿದ ಪರಿಣಾಮ 8 ಜನ ಸಾವಿಗೀಡಾದ ಭೀಕರ ಘಟನೆ ಇಂದು. ಘಟನೆ ಜಾನುವರಿ ೧೩ ಕ್ಕೆ ಅಂದರೆ ಇಂದು ಮುಂಜಾನೆ ಜರುಗಿದೆ . ಬೆಳಗ್ಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐರಾವತ್ ಬಸ್ಸಿನಲ್ಲಿ ಸಿಹಿ ನಿದ್ರೆಯಲ್ಲಿದ್ದ ಜನರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಾಲಕ ಲಕ್ಷ್ಮಣ್(38), ಶಿವಪ್ಪ, ಡಯಾನ(20), ಗಂಗಾಧರ್(48) ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತರಾದರೆ, ಓರ್ವ ದುರ್ದೈವಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ ಉಳಿದೆಲ್ಲರಿಗೂ ಗಾಯವಾಗಿದ್ದು ಹಾಸನ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿದ್ದವರೇ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.ನಿದ್ದೆಯಲ್ಲಿ ಇದ್ಧಾಂತ ಎಂಟು ಮಂದಿ ಹೀಗೆ ಜವರಾಯನಲ್ಲಿಗೆ ಹೋಗಿರುವುದು ದುರಂತವೇ ಸರಿ .

ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸಿನಿಂದಾಗಿ ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!