By: Oneindia Kannada Video Team
Published : December 01, 2017, 01:20

2008ರಿಂದ ಭಾರತವನ್ನ ಕಾಡಿದ 7 ಅಪಾಯಕಾರಿ ಚಂಡಮಾರುತಗಳು

Subscribe to Oneindia Kannada

ಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತ. ಪ್ರಕೃತಿಯ ಅಪರಿಮಿತ ಶಕ್ತಿಯೆದುರು ಮನುಷ್ಯ ತೃಣಸಮಾನ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿಯೇ ಪ್ರತಿವರ್ಷವೂ ಒಂದಿಲ್ಲೊಂದು ನೈಸರ್ಗಿಕ ವಿಕೋಪಗಳು ನಡೆಯುತ್ತಲೇ ಇರುತ್ತವೆ. ಇದೀಗ ತಮಿಳುನಾಡಿನಲ್ಲಿ ಸ್ಮಶಾನ ಮೌನ ಸೃಷ್ಟಿಸಿರುವ ಓಖಿ ಚಂಡಮಾರುತವೂ ಅದರದೇ ಒಂದು ಭಾಗ.ಈಗಾಗಲೇ 8 ಜನರನ್ನು ಬಲಿತೆಗೆದುಕೊಂಡ ಓಖಿ, ತಮಿಳುನಾಡಿನ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹೆಚ್ಚು ಪ್ರಾಣಹಾನಿ ತಪ್ಪಿಸುವುದಕ್ಕಾಗಿ ಈಗಾಗಲೇ ಇಲ್ಲಿನ ಸರ್ಕಾರ ಕ್ರಮಕೈಗೊಂಡಿದ್ದು, ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿದೆ.ಓಖಿಯಂಥ ಚಂಡಮಾರುತಗಳು ಭಾರತಕ್ಕೆ ಹೊಸತೇನಲ್ಲ. ಕಳೆದ ಹಲವು ವರ್ಷಗಳಿಂದ ಒಂದಿಲ್ಲೊಂದು ಅಪಾಯಕಾರಿ ಚಂಡಮಾರತಕ್ಕೆ ಭಾರತದ ಹಲವು ರಾಜ್ಯಗಳು ಮೈಯೊಡ್ಡಿವೆ, ಮರುಗಿವೆ. ಪ್ರಕೃತಿಯ ಮುನಿಸಿಗೆ ತಮ್ಮ ಬಂಧುಬಾಂಧವರನ್ನು ಕಳೆದುಕೊಂಡ ಹಲವರಿಗೆ ಈ ಚಂಡಮಾರುತಗಳು ದುಃಸ್ವಪ್ನವೆನ್ನಿಸಿವೆ.ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಹುಡುಕಿ ಹವಾಮಾನ ಇಲಾಖೆಯೇ ಚಂಡಮಾರುತಗಳಿಗೆ ನಾಮಕರಣ ಮಾಡುತ್ತದೆ! ಹಾಗೆಯೇ ಈ ಬಾರಿಯ ಚಂಡಮಾರುತಕ್ಕೆ 'ಓಖಿ' ಎಂದು ಹೆಸರಿಡಲಾಗಿದೆ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!