By : Oneindia Kannada Video Team
Published : December 14, 2017, 12:47

2ನೇ ಏಕದಿನ ಪಂದ್ಯ ಭಾರತಕ್ಕೆ ಲಂಕಾ ವಿರುದ್ಧ ಭರ್ಜರಿ ಜಯ

ಪ್ರವಾಸಿ ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ (208) ಅಜೇಯ ಆಕರ್ಷಕ ದ್ವಿಶತಕದ ನೆರವಿನಿಂದ ಟೀಂ ಇಂಡಿಯಾ 141 ರನ್ ಗಳ ಗೆಲುವಿನ ನಗೆ ಬೀರಿದೆ.ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ, ರೋಹಿತ್ ಶರ್ಮಾ ಅವರ ಬೌಂಡರಿ ಸಿಕ್ಸರ್ ಚಿತ್ತಾರದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ಲಂಕಾಗೆ 393 ರನ್ ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಸಿಂಹಳೀಯರು 50 ಓವರ್ ಗಳಲ್ಲಿ 249 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ 141 ರನ್ ಗಳಿಂದ ಜಯಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಮಾಡಿಕೊಂಡಿತು.ನಾಯಕ ರೋಹಿತ್ ಶರ್ಮ ಅವರು ಅಜೇಯ ದ್ವಿಶತಕ ಹಾಗೂ ಶಿಖರ್ ಧವನ್ ಹಾಗೂ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರ ತಲಾ ಅರ್ಧಶತಕದ ನೆರವಿನಿಂದ ಭಾರತ 50 ಓವರ್ ಗಳಲ್ಲಿ 392/4 ಸ್ಕೋರ್ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!