By: Oneindia Kannada Video Team
Published : December 21, 2017, 03:29

2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು : ಯಾರು ಏನ್ ಹೇಳ್ತಾರೆ?

Subscribe to Oneindia Kannada

ಭಾರತ ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟು ಮಾಡಿದ 2 ಜಿ ಹಗರಣದ ತೀರ್ಪು ಇಂದು ಹೊರಬಿದ್ದಿದ್ದು, ಅಂದುಕೊಂಡಿದ್ದೇ ಒಂದು. 2014ರಲ್ಲಿ ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ನಡೆದಿದ್ದ 30 ಸಾವಿರ ಕೋಟಿ ರು. 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪು ಹೊರ ಬಿದ್ದಿದೆ.ಮಾಜಿ ಸಚಿವ ಎ.ರಾಜಾ, ಕರಣಾನಿಧಿ ಅವರ ಪುತ್ರಿ ಕನ್ನಿಮೊಳಿ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಖುಲಾಸೆಗೊಳಿಸಿ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಗುರುವಾರ ಮಹತ್ವದ ಆದೇಶ ಹೊಡಿಸಿದ್ದಾರೆ.ಹರಣವನ್ನು ಸಾಬೀತುಪಡಿಸಲು ಸಿಬಿಐ ಮತ್ತು ಇಡಿ ವಿಫಲವಾಗಿದೆ. ಇದರಿಂದ ಈ ಆರೋಪವನ್ನು ಕೋರ್ಟ್ ತಳ್ಳಿ ಹಾಕಿದೆ. ಇದರಿಂದ ಈ ಹಗರಣದ ತನಿಖೆ ನಡೆಸಿದ್ದ ಸಿಬಿಐ ಹಾಗೂ ಇಡಿಗೆ ತೀವ್ರ ಮುಖಭಂಗವಾಗಿದೆ.ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಇನ್ನು ಈ ಬಹುಕೋಟಿ ಹಗರಣದಲ್ಲಿ ಅಂತಿಮ ತೀರ್ಪಿನ ಬಗ್ಗೆ ಯಾರು ಏನು ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!