By : Oneindia Kannada Video Team
Published : December 02, 2017, 10:27

ಗುಜರಾತಿನಲ್ಲಿ 24 ಬಿಜೆಪಿ ಸದಸ್ಯರ ಅಮಾನತು

ಗುಜರಾತ್ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗ ಭಾರತೀಯ ಜನತಾ ಪಕ್ಷ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 24 ಕ್ಕೂ ಹೆಚ್ಚು ಸದಸ್ಯರನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಖಡಕ್ ಸಂದೇಶ ನೀಡಿದೆ. ಸಂಸದರಾದ ಭುಪೇಂದರ್ ಸಿನ್ಹಾ ಪ್ರಭಾತ್ ಸಿನ್ಹಾ ಸೋಲಂಕಿ, ಕಾನ್ಯೆ ಪಟೇಲ್, ಬಿಮಲ್ ಶಾ ಸೇರಿದಂತೆ ಇನ್ನೂ 21 ಜನರನ್ನು ಅಮಾನತು ಮಾಡಲಾಗಿದೆ.ಡಿಸೆಂಬರ್ 9 ಮತ್ತು 14 ರಂದು ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೆಲವು ಬಿಜೆಪಿ ನಾಯಕರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಒಟ್ನಲ್ಲಿ ಗುಜರಾತ್ ಎಲೆಕ್ಷನ್ ಈ ಬಾರಿ ಭಾರಿ ಕುತೂಹಲ ಸೃಷ್ಟಿಸುವಲ್ಲಿ ಯಶಸ್ವಿ ಯಾಗಿದೆ . ಮುಂದೇನಾಗುತ್ತೆ ಅನ್ನೋ ಕಾತುರ ದೇಶದಾದ್ಯಂತ ಬಹಳ ಹೆಚ್ಚಾಗಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!