By: Oneindia Kannada Video Team
Published : December 27, 2017, 12:13

2018ರ 2 ಪ್ರಮುಖ ಘಟನೆಗಳ ಭವಿಷ್ಯ ನುಡಿದ ಕಣ್ಣಿಲ್ಲದ ಮುದುಕಿ ಬಲ್ಗೇರಿಯಾದ ಬಾಬಾ ವಂಗಾ

Subscribe to Oneindia Kannada

ಕಣ್ಣು ಇಲ್ಲದಿದ್ದರೂ ಜಗತ್ತಿನ ಭವಿಷ್ಯ ನೋಡುವ ಒಳಗಣ್ಣು ಇದ್ದ ಅಜ್ಜಿ ಬಲ್ಗೇರಿಯಾ ಮೂಲದ ಬಾಬಾ ವಂಗಾ 2018ರಲ್ಲಿ ಸಂಭವಿಸುವ ಎರಡು ಪ್ರಮುಖ ಘಟನಾವಳಿಗಳ ಬಗ್ಗೆ ತಾವು ಬರೆದಿರುವ ಭವಿಷ್ಯದಲ್ಲಿ ನಮೂದಿಸಿದ್ದಾರೆ. ಭಾರಿ ಬಿರುಗಾಳಿ ಕಾರಣದಿಂದಾಗಿ ಕಣ್ಣು ಕಳೆದುಕೊಂಡ ಬಲ್ಗೇರಿಯಾದ ಬಾಬಾ ವಂಗಾ ಆ ನಂತರ ಜನರ ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ ಅವರು 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಬದಲಾವಣೆಗಳ ಬಗ್ಗೆ ಭವಿಷ್ಯವಾಣಿಯನ್ನು ದಾಖಲು ಮಾಡಿ ಹೋಗಿದ್ದಾರೆ.ಸುನಾಮಿ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ ಮುಂತಾದ ಪ್ರಮುಖ ಘಟನಾವಳಿಗಳನ್ನು ಮುಂಚೆಯೇ ಊಹಿಸಿದ್ದ ಬಾಬಾ ವಂಗಾ 2018ರ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳನ್ನು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ.ಬಾಬಾ ವಂಗಾ ಅವರ ಭವಿಷ್ಯವಾಣಿ ಪ್ರಕಾರ ಜಗತ್ತಿನ ದೊಡ್ಡಣ ಎಂಬ ವಿಶೇಷಣವನ್ನು ಅಮೆರಿಕ ಕಳೆದುಕೊಳ್ಳಲಿದೆ, ದೊಡ್ಡ ದೇಶ ಚೀನಾ ಅಮೆರಿಕವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದಿಕ್ಕಿ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಬಾಬಾ ವಂಗಾ ಅವರು ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಶುಕ್ರ ಗ್ರಹದಲ್ಲಿ ಹೊಸ ನೈಸರ್ಗಿಕ ಶಕ್ತಿ ಸಂಪನ್ಮೂಲವೊಂದನ್ನು ವಿಜ್ಞಾನಿಗಳು ಗುರುತಿಸಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!