By: Oneindia Kannada Video Team
Published : November 23, 2017, 11:54

2018ರ ಭವಿಷ್ಯ : ಭೂಕಂಪದಿಂದ ತತ್ತರಿಸಲಿದೆ ಭೂಮಿ

Subscribe to Oneindia Kannada

2018ರಲ್ಲಿ ಭೂಕಂಪದ ಭಯೋತ್ಪಾದನೆಗೆ ತತ್ತರಿಸಲಿದೆ ಬುವಿ. ಈ ಸುದ್ದಿಯನ್ನು ಓದುತ್ತಾ ಹೋದಂತೆ ನೀವೇನು ಪತ್ರಕರ್ತರೋ ಅಥವಾ ಭಯೋತ್ಪಾದಕರೋ ಅಂತ ಅನುಮಾನ ಪಡುವ ಸಾಧ್ಯತೆ ಇದೆ. ಆದರೂ ಇದು ತೀರಾ ಮುಖ್ಯವಾದ ಎಚ್ಚರಿಕೆಯಾದ್ದರಿಂದ ಸುದ್ದಿ ಮಾಡುವುದು ಅನಿವಾರ್ಯ. ಚಂಡಮಾರುತವೋ ಭಾರೀ ಮಳೆಯೋ ಆದರೆ ಮುಂಚಿತವಾಗಿಯೇ ಅವುಗಳ ಸೂಚನೆ ಸಿಕ್ಕು, ಜಾಗ್ರತೆ ವಹಿಸಲು ಅನುಕೂಲವಾಗುತ್ತದೆ.2018ನೇ ಇಸವಿ ಭೂಮಿ ಮೇಲಿನ ತೀರಾ ಅನಿಶ್ಚಿತತೆಯ ವರ್ಷ ಎನ್ನಲಾಗಿದೆ. ಇಂಥ ಕಡೆಯೇ ಭೂಕಂಪ ಸಂಭವಿಸುತ್ತದೆ ಎಂದು ಬೊಟ್ಟು ಮಾಡಿ ಹೇಳದಿರಬಹುದು. ಆದರೆ ನಿಖರತೆಗೆ ಹತ್ತಿರವಾಗುವಂತೆ ಹೇಳಬಹುದಾಗಿದೆ. ಆದ್ದರಿಂದ ಭೂಕಂಪನದಂಥ ಅನಾಹುತವನ್ನು ಮುಂಚಿತವಾಗಿ ತಿಳಿದುಕೊಳ್ಳುವ ತಂತ್ರಜ್ಞಾನದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಪಡಿಸಿದರೂ ಅನುಕೂಲವಾಗುತ್ತದೆ.ಆದರೆ, ಭೂ ಕಂಪನವನ್ನು ಹೇಗೆ ಮುಂಚಿತವಾಗಿ ತಿಳಿದುಕೊಳ್ಳುವುದು? ಇಲ್ಲ, ಭೂ ಕಂಪನದ ಮುನ್ಸೂಚನೆಯನ್ನೂ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಏಕೆಂದರೆ ಭೂಮಿಯು ತಿರುಗುವ ವೇಗದಲ್ಲೇ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆಯಂತೆ. ಇಂಥ ಸನ್ನಿವೇಶದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!