By: Oneindia Kannada Video Team
Published : November 08, 2017, 02:40

Himachal Pradesh Assembly Poll 2017 : ಬಿಜೆಪಿಗೆ ಅಧಿಕಾರ ಎಂದು ನುಡಿದ ಸಿ ವೋಟರ್ ಸಮೀಕ್ಷೆ

Subscribe to Oneindia Kannada

ಸಿ-ವೋಟರ್ ಸಮೀಕ್ಷೆಯಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು. ಗುರುವಾರ ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ಬಿಡುಗಡೆ ಮಾಡಿದೆ. ಬಿಜೆಪಿ ಶೇ. 11.8 ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಶೇಕಡಾ 5ರಷ್ಟು ಕಡಿಮೆ ಮತಗಳನ್ನು ಪಡೆದುಕೊಂಡು ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.ಬಿಜೆಪಿ ತನ್ನ ಸೀಟು ಗಳಿಕೆಯನ್ನು 26 ಸ್ಥಾನಗಳಿಂದ 52 ಸ್ಥಾನಗಳಿಗೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ ಹಾಲಿ 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ ಎಂದು ಶೇಕಡಾ 37ರಷ್ಟು ಜನರು ಹೇಳಿದ್ದಾರೆ. ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಎರಡನೇ ಸ್ಥಾನದಲ್ಲಿದ್ದು ಶೇಕಡಾ 26 ರಷ್ಟು ಜನರು ಈ ಸಮಸ್ಯೆಗಳತ್ತ ಬೆಟ್ಟು ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ಇತರ ಕಾರಣಗಳನ್ನು ಶೇಕಡಾ 9ರಷ್ಟು ಜನರು ಬೆಂಬಲಿಸಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿಯೇ ಬೆಸ್ಟ್ ಎಂಬುದು ಜನರ ಅಭಿಪ್ರಾಯವಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!