By: Oneindia Kannada Video Team
Published : November 21, 2017, 01:45

ಮೈಸೂರಿನಲ್ಲಿ ಭಿಕ್ಷುಕಿ ವೃದ್ದೆ ದೇವಸ್ಥಾನಕ್ಕೆ 2 ಲಕ್ಷ ದಾನ

Subscribe to Oneindia Kannada

ಭಿಕ್ಷೆ ಬೇಡಿ ಬಂದ 2 ಲಕ್ಷ ಯಾದವಗಿರಿ ಪ್ರಸನ್ನ ಆಂಜನೇಯನಿಗೆ ದಾನ. ಈ ವೃದ್ಧೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದು, ಆಕೆಗೆ ಈವರೆಗೆ ಬಂದ ಒಂದು ಪೈಸೆ ಖರ್ಚು ಮಾಡಿಲ್ಲ. ಮತ್ತೊಬ್ಬರಿಂದ ಸಹಾಯಕ್ಕೆ ಕೈ ಚಾಚುವ ಆಕೆಯದೇ ಔದಾರ್ಯ ಈಗ ಬಯಲಿಗೆ ಬಂದಿದೆ. ದೇವಸ್ಥಾನದ ಮುಂದೆ ಮತ್ತೊಬ್ಬರಿಂದ ಪಡೆದ ಹಣವನ್ನು ತಾನು ದಿನವೂ ಪ್ರಸಾದ ಸ್ವೀಕರಿಸುವ ದೇವರಿರುವ ದೇವಾಲಯಕ್ಕೆ ನೀಡಿದ್ದಾರೆ.ಹ್ಞಾಂ, ಹಾಗೆ ಆಕೆ ನೀಡಿದ ಮೊತ್ತ ಬರೋಬ್ಬರಿ 2 ಲಕ್ಷ ರುಪಾಯಿ. ಮೂಲತಃ ಮೈಸೂರಿನವರೇ ಆದ ಎಂ.ವಿ ಸೀತಾ, ಯಾದವಗಿರಿಯ ಪ್ರಸನ್ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ 20 ವರ್ಷದಿಂದ ಭಿಕ್ಷೆ ಬೇಡುತ್ತಿರುವ ವೃದ್ಧೆ ಮಾಡಿದ ಈ ದಾನ ಕಾರ್ಯ ಎಲ್ಲರ ಮಧ್ಯೆ ಚರ್ಚೆಗೆ ಕಾರಣವಾಗಿದೆ.ತಾನು ಭಿಕ್ಷೆ ಬೇಡಿ ಬದುಕುತ್ತಿದ್ದರೂ ಈಕೆಗೆ ದೇವರ ಮೇಲೆ ಅಪಾರ ಭಕ್ತಿ ಹಾಗೂ ಗೌರವ. ನಿತ್ಯ ಇದೇ ದೇವಸ್ಥಾನದ ಮುಂದೆ ಭಿಕ್ಷೆ ಬೇಡಿದ ಹಣವನ್ನು ದೇವಸ್ಥಾನದ ಖರ್ಚಿಗೇ ನೀಡಿದ್ದಾರೆ. ಸೀತಾ ಅವರ ಕೆಲಸದಿಂದ ವಿಸ್ಮಿತರಾದ ಜನರು ಕೈಮುಗಿದು ಗೌರವ ಸಲ್ಲಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!