By : Oneindia Kannada Video Team
Published : December 12, 2017, 05:56

1ನೇ ಏಕದಿನ ಪಂದ್ಯ: ಭಾರತಕ್ಕೆ ಹೀನಾಯ ಸೋಲು

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿ, 112 ಸ್ಕೋರಿಗೆ ಆಲೌಟ್ ಆಯಿತು, ಅಲ್ಪಮೊತ್ತವನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 3 ವಿಕೆಟ್ ಕಳೆದುಕೊಂಡು 20.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಈ ಗೆಲುವಿನ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 1-0 ಮುನ್ನಡೆ ಪಡೆದುಕೊಂಡಿದೆ. ಶ್ರೀಲಂಕಾ ಪರ ಉಪುಲ್ ತರಂಗಾ 49ರನ್, ಏಂಜೆಲೋ ಮ್ಯಾಥ್ಯೂಸ್ ಅಜೇಯ 25, ನಿರೋಷನ್ ಡಿಕ್ವೆಲ್ಲಾ ಅಜೇಯ 26ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. 0 ರನ್ ಸ್ಕೋರ್ ಮಾಡುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಮತ್ತೆ ಚೇತರಿಕೆ ಕಾಣಲಿಲ್ಲ. ಎಂಎಸ್ ಧೋನಿ ಅವರು 87 ಎಸೆತಗಳಲ್ಲಿ 65 ರನ್ (10 ಬೌಂಡರಿ, 2 ಸಿಕ್ಸರ್), ಕುಲದೀಪ್ ಯಾದವ್ 19ರನ್ (4 ಬೌಂಡರಿ) ಹಾಗೂ ಹಾರ್ದಿಕ್ ಪಾಂಡ್ಯ 10ರನ್ ಗಳಿಸಿದ್ದು ಬಿಟ್ಟರೆ, ಮುಂತಾದವರು ಎರಡಂಕಿ ದಾಟಲಿಲ್ಲ. 38.2 ಓವರ್ ಗಳಲ್ಲಿ ಭಾರತ 112 ಸ್ಕೋರಿಗೆ ಸರ್ವ ಪತನ ಕಂಡಿತು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!