keyboard_backspace

ಮರಣದಂಡನೆ, ಅಂಗಚ್ಛೇದನ ಶಿಕ್ಷೆ: 'ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ' ಎಂದ ತಾಲಿಬಾನ್‌!

Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 24: ತಾಲಿಬಾನ್‌ ಈ ಹಿಂದೆ ಇದ್ದಂತೆ ಇಲ್ಲ, ಅದರ ಕೆಲವು ಕ್ರೂರ ನೀತಿಗಳು ಬದಲಾಗಿದೆ ಎಂದೆಲ್ಲಾ ಕೆಲವು ರಾಷ್ಟ್ರಗಳು ವಾದ ಮಾಡುತ್ತಿದೆ. ಆದರೆ ತಾಲಿಬಾನ್‌ ಎಂದಿಗೂ ಬದಲಾಗುವುದಿಲ್ಲ ಎಂಬುವುದುನ್ನು ತಾಲಿಬಾನ್‌ ನೀಡಿದ ಒಂದು ಹೇಳಿಕೆ ಸಾಬೀತು ಪಡಿಸಿದೆ. "ಶಿಕ್ಷೆ ನೀಡುವ ಸಂದರ್ಭದಲ್ಲಿ ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ," ಎಂದು ತಾಲಿಬಾನ್‌ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಈ ಹಿಂದೆ 1996 ರಿಂದ 2001 ರಲ್ಲಿ ಅಫ್ಘಾನಿಸ್ತಾನದಲ್ಲಿ ಆಡಳಿತವನ್ನು ನಡೆಸಿತ್ತು. ಈ ಸಂದರ್ಭದಲ್ಲಿ ತಾಲಿಬಾನ್‌ ಬಹಳ ಕ್ರೂರವಾದ ಶಿಕ್ಷೆಗಳನ್ನು ವಿಧಿಸುತ್ತಿತ್ತು. ಈ ಚಿತ್ರಗಳು ಇಂದಿಗೂ ಕೂಡಾ ಜನರಲ್ಲಿ ಭೀತಿ ಹುಟ್ಟಿಸುವಂತಿದೆ.

 ಅಫ್ಘಾನ್‌ನಲ್ಲಿ ಭಾರತೀಯನ ಅಪಹರಣ: 'ಸಂಬಂಧಿಸಿದ ಎಲ್ಲರೊಂದಿಗೆ ಸಂಪರ್ಕವಿದೆ' ಎಂದ ಭಾರತ ಅಫ್ಘಾನ್‌ನಲ್ಲಿ ಭಾರತೀಯನ ಅಪಹರಣ: 'ಸಂಬಂಧಿಸಿದ ಎಲ್ಲರೊಂದಿಗೆ ಸಂಪರ್ಕವಿದೆ' ಎಂದ ಭಾರತ

2021 ರಲ್ಲಿ ಅಫ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭ ಮಾಡುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿಯನ್ನು ನಡೆಸಿದೆ. ಆಗಸ್ಟ್‌ ವೇಳೆಗೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದ್ದು, ಈಗ ತನ್ನ ಸರ್ಕಾರವನ್ನು ರಚಿಸಿಕೊಂಡಿದೆ. ಈ ನಡುವೆ ಕತಾರ್‌ ಹಾಗೂ ಪಾಕಿಸ್ತಾನ ತಾಲಿಬಾನ್‌ ಈ ಹಿಂದೆ ಇದ್ದಂತೆ ಈಗ ಇಲ್ಲ ಎಂದು ಹೇಳಿಕೊಂಡಿದೆ. "ತಾಲಿಬಾನ್‌ ಈಗ ಬದಲಾಗಿದೆ," ಎಂದು ಪಾಕಿಸ್ತಾನ, ಕತಾರ್‌ ಹೇಳುತ್ತಿರುವ ನಡುವೆ ತಾಲಿಬಾನ್‌ನ ನಾಯಕ ಮುಲ್ಲಾ ನೂರುದ್ದೀನ್ ತುರಾಬಿ "ಈ ಹಿಂದಿನ ಶಿಕ್ಷೆ ನಿಯಮವು ಈಗಿನ ತಾಲಿಬಾನ್ ಸರ್ಕಾರದಲ್ಲೂ ಇರಲಿದೆ," ಎಂದಿದ್ದಾರೆ.

ವಿದೇಶದಲ್ಲಿ ಸಿಲುಕಿದ ನೂರಾರು ಅಫ್ಘಾನ್‌ ರಾಜತಾಂತ್ರಿಕರು: ಕಾಡುತ್ತಿದೆ ಹಣದ ಅಭಾವ ವಿದೇಶದಲ್ಲಿ ಸಿಲುಕಿದ ನೂರಾರು ಅಫ್ಘಾನ್‌ ರಾಜತಾಂತ್ರಿಕರು: ಕಾಡುತ್ತಿದೆ ಹಣದ ಅಭಾವ

 ಯಾರಿದು ಮುಲ್ಲಾ ನೂರುದ್ದೀನ್ ತುರಾಬಿ?

ಯಾರಿದು ಮುಲ್ಲಾ ನೂರುದ್ದೀನ್ ತುರಾಬಿ?

ಮುಲ್ಲಾ ನೂರುದ್ದೀನ್ ತುರಾಬಿ ತಾಲಿಬಾನ್‌ ಸಂಘಟನೆಯ ಮೂಲ ಸ್ಥಾಪಕರಲ್ಲಿ ಒಬ್ಬರು ಕೂಡಾ ಹೌದು. ಈ ಹಿಂದಿನನ ತಾಲಿಬಾನ್ ಸರ್ಕಾರದಲ್ಲಿ ನ್ಯಾಯಾಂಗ ಸಚಿವರು ಆಗಿದ್ದರು. ದೇಶದ ಈ ತಾಲಿಬಾನ್‌ ನೀತಿ ಸಚಿವಾಲಯದ ಮುಖ್ಯಸ್ಥರು ಆಗಿದ್ದರು. ಪ್ರಸ್ತುತ ಮುಲ್ಲಾ ನೂರುದ್ದೀನ್ ತುರಾಬಿ ಜೈಲಿನ ಉಸ್ತುವಾರಿಯನ್ನು ನೋಡಿಕೊಳ್ಳುವವರು ಆಗಿದ್ದಾರೆ. 1980 ನಡೆದ ಸಂಘರ್ಷದಲ್ಲಿ ಮುಲ್ಲಾ ನೂರುದ್ದೀನ್ ತುರಾಬಿ ತನ್ನ ಒಂದು ಕಣ್ಣು ಹಾಗೂ ಒಂದು ಕಾಲನ್ನು ಕಳೆದುಕೊಂಡಿದ್ದಾರೆ.

 ನಾವು ಕೇಳಿಲ್ಲ, ನೀವು ಕೇಳಬಾರದು, ಅಷ್ಟೇ ಎಂದ ತುರಾಬಿ

ನಾವು ಕೇಳಿಲ್ಲ, ನೀವು ಕೇಳಬಾರದು, ಅಷ್ಟೇ ಎಂದ ತುರಾಬಿ

ಗುರುವಾರ ಅಸೋಸಿಯೇಷನ್‌ ಪ್ರೆಸ್‌ನ ಸಂದರ್ಶನವೊಂದರಲ್ಲಿ ಮುಲ್ಲಾ ನೂರುದ್ದೀನ್ ತುರಾಬಿ ಹಾಜರಾಗಿದ್ದು, ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, "ನಾವು ಕ್ರಿಡಾಂಗಣದಲ್ಲಿ ಶಿಕ್ಷೆಯನ್ನು ಬಹಿರಂಗವಾಗಿ ನೀಡುವ ವಿಚಾರದಲ್ಲಿ ನಮ್ಮನ್ನು ಎಲ್ಲರೂ ಟೀಕೆ ಮಾಡಿದರು. ಆದರೆ ನಾವು ಬೇರೆಯವರ ಕಾನೂನು ಹಾಗೂ ಶಿಕ್ಷೆಯ ಬಗ್ಗೆ ಏನನ್ನು ಹೇಳಿಲ್ಲ. ಹಾಗಿರುವಾಗ ನಮ್ಮ ಕಾನೂನು ಹೇಗೆ ಇರಬೇಕು ಎಂದು ಯಾರು ಕೂಡಾ ಹೇಳಬಾರದು. ನಾವು ಇಸ್ಲಾಂ ಅನ್ನು ಪಾಲಿಸುತ್ತೇವೆ ಹಾಗೂ ಕುರಾನ್‌ ಪ್ರಕಾರವಾಗಿ ನಮ್ಮ ಕಾನೂನನ್ನು ನಾವು ರೂಪಿಸಿಕೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.

ಪಲಾಯನವಾಗಿರುವ ಅಥವಾ ತಲೆಮರೆಸಿಕೊಂಡಿರುವ ಅಫ್ಘಾನ್‌ ಮಹಿಳಾ ನಾಯಕರು ಯಾರು?ಪಲಾಯನವಾಗಿರುವ ಅಥವಾ ತಲೆಮರೆಸಿಕೊಂಡಿರುವ ಅಫ್ಘಾನ್‌ ಮಹಿಳಾ ನಾಯಕರು ಯಾರು?

 ''ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ''!, ಎಂದ ತಾಲಿಬಾನ್‌

''ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ''!, ಎಂದ ತಾಲಿಬಾನ್‌

"ಈ ಬಾರಿಯ ನಮ್ಮ ಸರ್ಕಾರದಲ್ಲಿ ಮಹಿಳೆಯರು ಸೇರಿದಂತೆ ನ್ಯಾಯಾಧೀಶರು ಪ್ರಕರಣಗಳ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಅಫ್ಘಾನಿಸ್ತಾನದ ಕಾನೂನುಗಳ ಆಧಾರವು ಕುರಾನ್ ಆಗಿರುತ್ತದೆ," ಎಂದಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ, "ಭದ್ರತೆಯ ದೃಷ್ಟಿಯಿಂದ ಶಿಕ್ಷೆಯ ಸಂದರ್ಭದಲ್ಲಿ ಕೈಗಳನ್ನು ಕತ್ತರಿಸುವುದು ಬಹಳ ಮುಖ್ಯ," ಎಂದು ಕೂಡಾ ಅಭಿಪ್ರಾಯಿಸಿದ್ದಾರೆ. ಈ ಮೂಲಕ ತಾಲಿಬಾನ್‌ ಎಂದಿಗೂ ಬದಲಾಗದು ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಕಳೆದ ಬಾರಿಯ ತಾಲಿಬಾನ್‌ ಸರ್ಕಾರದಂತೆ ಶಿಕ್ಷೆಗಳನ್ನು ಬಹಿರಂಗವಾಗಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಮುಲ್ಲಾ ನೂರುದ್ದೀನ್ ತುರಾಬಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, "ನಮ್ಮ ಸಂಸತ್ತು ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ನೀತಿಯನ್ನು ಅಭಿವೃದ್ದಿ ಪಡಿಸಲಾಗುತ್ತದೆ," ಎಂದಿದ್ದಾರೆ.

 ಈ ಹಿಂದೆ 1996 ರಲ್ಲಿ ಕ್ಯಾಸೆಟ್‌ಗಳನ್ನು ನಾಶ ಮಾಡಿದ್ದ ಮುಲ್ಲಾ

ಈ ಹಿಂದೆ 1996 ರಲ್ಲಿ ಕ್ಯಾಸೆಟ್‌ಗಳನ್ನು ನಾಶ ಮಾಡಿದ್ದ ಮುಲ್ಲಾ

1996 ರಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಿದ ಸಂದರ್ಭದಲ್ಲಿ, ಮಹಿಳಾ ಪತ್ರಕರ್ತರ ಮೇಲೆ ಕಠಿಣ ಕ್ರಮವನ್ನು ಕೈಗೊಂಡಿತ್ತು. 1996 ರಲ್ಲಿ ತುರಾಬಿ ಕಾರುಗಳಲ್ಲಿ ಇದ್ದ ಸಂಗೀತದ ಟೇಪ್‌ಗಳನ್ನು ಕಿತ್ತು ಹಾಕುತ್ತಿದ್ದರು. ಹಾಗೆಯೇ ಆ ಸಂದರ್ಭದಲ್ಲಿ ತಾಲಿಬಾನ್‌ ಸರ್ಕಾರ ಸಂಗೀತವನ್ನು ಬ್ಯಾನ್‌ ಮಾಡಿದ ಕಾರಣ ಮರಗಳು ಮತ್ತು ಇತರೆ ಪ್ರದೇಶಗಳಲ್ಲಿ ಕ್ಯಾಸೆಟ್‌ಗಳನ್ನು ಜನರು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಮುಲ್ಲಾ ನೂರುದ್ದೀನ್ ತುರಾಬಿ ಈ ಎಲ್ಲಾ ಪ್ರದೇಶಗಳಿಂದ ಕ್ಯಾಸೆಟ್‌ಗಳನ್ನು ಕಸಿದುಕೊಂಡು ನಾಶ ಮಾಡಿದ್ದರು. ಇನ್ನು ಎಲ್ಲಾ ಸಕಾರಿ ಕಚೇರಿಗಳಲ್ಲಿ ಪುರುಷರು ಪೇಟ ಧರಿಸುವಂತೆ ಒ‌ತ್ತಾಯ ಮಾಡಿದ್ದರು. ಹಾಗೆಯೇ ಗಡ್ಡವನ್ನು ಕತ್ತಿರಿಸಿ ಟ್ರಿಮ್‌ ಮಾಡಿದ್ದವರಿಗೆ ಗಡ್ಡ ಬೆಳೆಸುವಂತೆ ಆದೇಶ ಮಾಡಿದ್ದರು. ಕ್ರೀಡೆಗಳನ್ನು ನಿಷೇಧಿಸಲಾಗಿತ್ತು. ಇನ್ನು ತುರಾಬಿಯು, "ಈ ಬಾರಿ ಟಿವಿ, ಮೊಬೈಲ್‌ ಫೋನ್‌, ವಿಡಿಯೋ, ಫೋಟೋವನ್ನು ನೋಡಲು ಅವಕಾಶ ನೀಡಲಾಗುವುದು," ಎಂದು ಹೇಳಿದ್ದು, "ಇದು ಅಗತ್ಯ" ಎಂದಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Executions, Amputations in Afghan: 'Cutting off of hands very necessary' says Taliban official. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X