keyboard_backspace

ಪ್ರಧಾನಿ ಮೋದಿ ಹುಟ್ಟು ಹಬ್ಬದಂದೇ 'ರಾಷ್ಟ್ರೀಯ ನಿರುದ್ಯೋಗ ದಿನ' ಭಾರೀ ಟ್ರೆಂಡ್‌!

Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 71 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜನ್ಮ ದಿನದ ಹಿನ್ನೆಲೆ ಹಲವಾರು ಸಹೋದ್ಯೋಗಿಗಳು, ಅಂತಾರಾಷ್ಟ್ರೀಯ ನಾಯಕರು, ರಾಜಕಾರಣಿಗಳು, ಮಾಧ್ಯಮದವರು ಹಾಗೂ ಸಾಮಾನ್ಯ ಜನರು ಶುಭ ಹಾರೈಸಿದ್ದಾರೆ. ಆದರೆ ಈ ನಡುವೆ ಮಿಲಿಯನ್‌ಗಟ್ಟಲೆ ನೆಟ್ಟಿಗರು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಪ್ರಧಾನಿ ಮೋದಿ ಹುಟ್ಟು ಹಬ್ಬದ ದಿನದಂದೇ ಆಚರಣೆ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ತಾನು ಪ್ರಧಾನಿಯಾದ ಬಳಿಕ ವರ್ಷಕ್ಕೆ ಸುಮಾರು ಎರಡು ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ನಿರುದ್ಯೋಗ ಸಮಸ್ಯೆಯು ಭಾರೀ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಕೂಡಾ ಕಾಂಗ್ರೆಸ್‌, ಸಿಪಿಐಎಂ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಪ್ರಧಾನಿ ಮೋದಿ ಜನ್ಮ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡುತ್ತಿದೆ.

ಪ್ರಧಾನಿ ಮೋದಿ ಜನ್ಮದಿನದಂದೇ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ'ಪ್ರಧಾನಿ ಮೋದಿ ಜನ್ಮದಿನದಂದೇ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ'

ಟ್ವಿಟ್ಟರ್‌ನಲ್ಲಿ #HappyBdayModiji ಟ್ರೆಂಡ್‌ ಆಗಿತ್ತು. ಆದರೆ ಇದ್ದಕ್ಕಿಂದತೆ ಇನ್ನೆರಡು ಹ್ಯಾಷ್‌ ಟ್ಯಾಗ್‌ಗಳು ಮಿಲಿಯನ್‌ ಗಟ್ಟಲೆ ಟ್ರೆಂಡ್‌ ಆಗಿದೆ. #NationalUnemploymentDay and #राष्ट्रीय_बेरोजगार_दिवस ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್‌ ಆಗಿದ್ದು, #NationalUnemploymentDay ಟ್ಯಾಗ್‌ 1.12 ಮಿಲಿಯನ್‌ಗೂ ಅಧಿಕ ಬಾರಿ ಟ್ವಿಟ್ಟಿಗರು ಹಾಕಿದ್ದರೆ, #राष्ट्रीय_बेरोजगार_दिवस ಟ್ಯಾಗ್‌ ಅನ್ನು ಟ್ವಿಟ್ಟಿಗರು 1.58 ಮಿಲಿಯನ್‌ ಗೂ ಅಧಿಕ ಬಾರಿ ಹಾಕಿದ್ದಾರೆ. ಅದು ಕೂಡಾ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ. ಆ ಬಳಿಕವೂ ಈ ಟ್ಯಾಗ್‌ ಬಳಕೆ ಅಧಿಕವಾಗುತ್ತಿದೆ.

 ಮೋದಿ ಹುಟ್ಟು ಹಬ್ಬಕ್ಕಿಂತ ಅಧಿಕ ಟ್ರೆಂಡ್‌ ನಿರುದ್ಯೋಗ ದಿನ

ಮೋದಿ ಹುಟ್ಟು ಹಬ್ಬಕ್ಕಿಂತ ಅಧಿಕ ಟ್ರೆಂಡ್‌ ನಿರುದ್ಯೋಗ ದಿನ

ಮಿಲಿಯನ್‌ ಗಟ್ಟಲೆ ನಿರುದ್ಯೋಗ ದಿನ ಟ್ರೆಂಟ್‌ ಆಗುತ್ತಿರುವ ನಡುವೆ ನರೇಂದ್ರ ಮೋದಿಗೆ ಶುಭ ಹಾರೈಸಿ ಮಾಡಲಾದ ಟ್ವೀಟ್‌ ಮಾತ್ರ ಸುಮಾರು 523 ಸಾವಿರ ಮಾತ್ರ ಆಗಿದೆ. ಇದು ನಿರುದ್ಯೋಗ ದಿನದ ಟ್ಯಾಗ್‌ಗಿಂತ ಸುಮಾರು ಐದು ಪಟ್ಟು ಕಡಿಮೆ ಬಳಕೆಯಾದ ಟ್ಯಾಗ್‌ ಆಗಿದೆ. ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಪ್ರಧಾನಿ ಮೋದಿಯ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿರುವ ಜನರು ಹಲವಾರು ಫೋಟೋಗಳು, ಮೇಮ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಗೆ ವ್ಯಂಗ್ಯ ಮಾಡಿದ್ದಾರೆ. ಮೋದಿ ಹುಟ್ಟು ಹಬ್ಬಕ್ಕಿಂತ ಅಧಿಕ ಟ್ರೆಂಡ್‌ ನಿರುದ್ಯೋಗ ದಿನ ಆಗಿದೆ.

 ಕಳೆದ ಒಂದು ತಿಂಗಳಲ್ಲೇ ನಿರುದ್ಯೋಗ ದರ ಶೇಕಡ 8.32 ಕ್ಕೆ ಏರಿಕೆ

ಕಳೆದ ಒಂದು ತಿಂಗಳಲ್ಲೇ ನಿರುದ್ಯೋಗ ದರ ಶೇಕಡ 8.32 ಕ್ಕೆ ಏರಿಕೆ

ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ (ಸಿಎಮ್‌ಐಇ) ಪ್ರಕಾರ, ಈ ವರ್ಷದ ಆಗಸ್ಟ್‌ ತಿಂಗಳೊಂದರಲ್ಲೇ ಸುಮಾರು 15 ಲಕ್ಷ ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಂದರೆ ಆಗಸ್ಟ್‌ ತಿಂಗಳಲ್ಲಿ ಪ್ರತಿ ದಿನ ಸುಮಾರು 50 ಸಾವಿರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇನ್ನು ದೇಶದಲ್ಲಿ ನಿರುದ್ಯೋಗ ದರವು ಜುಲೈನಲ್ಲಿ ಶೇಕಡ 6.95 ಇದ್ದು, ಆಗಸ್ಟ್‌ ವೇಳೆಗೆ ಸುಮಾರು ಶೇಕಡ 8.32 ಕ್ಕೆ ಏರಿಕೆ ಕಂಡಿದೆ. ಇನ್ನು 2011-12 ರಲ್ಲಿ ಭಾರತದಲ್ಲಿ ನಿರುದ್ಯೋಗ ದರವು ಶೇಕಡ 2.1 ಆಗಿತ್ತು. 2011-12 ರಿಂದ 2017-18 ರ ವೇಳೆಗೆ ನೋಟು ಅಮ್ಯಾನೀಕರಣದ ಬಳಿಕ ಭಾರತದಲ್ಲಿ ನಿರುದ್ಯೋಗ ದರವು ಶೇಕಡ 6.1 ಕ್ಕೆ ಏರಿಕೆ ಆಗಿದೆ. ಆದರೆ ಕಳೆದ ಒಂದು ತಿಂಗಳಿನಲ್ಲೇ ನಿರುದ್ಯೋಗ ದರವು ಶೇಕಡ 8.32 ಕ್ಕೆ ದಿಡೀರ್‌ ಏರಿಕೆ ಕಂಡಿದೆ.

ಪ್ರಧಾನಿ ಮೋದಿ ಹುಟ್ಟುಹಬ್ಬ: ಅರ್ಧ ದಿನದಲ್ಲೇ 1 ಕೋಟಿಗೂ ಅಧಿಕ ಲಸಿಕೆ ವಿತರಣೆಪ್ರಧಾನಿ ಮೋದಿ ಹುಟ್ಟುಹಬ್ಬ: ಅರ್ಧ ದಿನದಲ್ಲೇ 1 ಕೋಟಿಗೂ ಅಧಿಕ ಲಸಿಕೆ ವಿತರಣೆ

ಬಿಜೆಪಿ ಸರ್ಕಾರದಿಂದ ಜಿಎಸ್‌ಟಿ, ನೋಟು ಅಮಾನ್ಯೀಕರಣದ ಪೆಟ್ಟು

2014 ರಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷವು ನರೇಂದ್ರ ಮೋದಿ ಪ್ರಧಾನಿಯಾದರೆ ವರ್ಷಕ್ಕೆ ಸುಮಾರು ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಆರಂಭ ಮಾಡಿದ ಬಳಿಕ ಕೈಗೊಂಡ ಕೆಲವು ನಿರ್ಧಾರಗಳು ಭಾರತದಲ್ಲಿ ಭಾರೀ ನಿರುದ್ಯೋಗ ಸೃಷ್ಟಿಗೆ ಕಾರಣವಾಗಿದೆ. ನೋಟು ಅಮಾನ್ಯೀಕರಣ ಮಾಡಿದ ಬಳಿಕ ಅನೌಪಚಾರಿಕ ವಲಯವು ಸರಿ ಸುಮಾರು ಕುಸಿತವನ್ನು ಕಂಡಿದೆ. ಈ ನಡುವೆ ಸರಿಯಾದ ಯಾವುದೇ ಒಂದು ರೂಪುರೇಷೆಯನ್ನು ಮಾಡಿಕೊಳ್ಳದೆ ಸರಕು ಹಾಗೂ ಸೇವೆ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತಂದ ಹಿನ್ನೆಲೆ ಔಪಚಾರಿಕ ವಲಯವೂ ಕೂಡಾ ಭಾರಿ ಸಂಕಷ್ಟವನ್ನು ಅನುಭವಿಸಿದೆ. ಆದರೆ ಈ ನಡುವೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಭಾರೀ ಏರಿಕೆ ಆಗಿರುವುದನ್ನು ಕೇಂದ್ರ ಸಚಿವರುಗಳು ಸಮರ್ಥಿಸಿಕೊಂಡಿರುವುದು ಜನರು ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

 ಈ ವರ್ಷ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಈ ವರ್ಷ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿಯು ಮೂರು ವಾರಗಳ ಹ್ಯಾಪಿ ಬರ್ತ್‌ಡೇ ಪಿಎಂ ಲಸಿಕೆ ಬೂಸ್ಟರ್‌ ಅನ್ನು ನಡೆಸಲಿದೆ. ಬೂತ್‌ ಮಟ್ಟದಲ್ಲಿ ಸುಮಾರು ಐದು ಕೋಟಿ ಅಂಚೆ ಚೀಟಿಗಳಲ್ಲಿ ಧನ್ಯವಾದ ಮೋದಿಜೀ ಎಂದು ಬರೆದು ಪೋಸ್ಟ್‌ ಮಾಡುವುದು, ಹಾಗೆಯೇ ಸುಮಾರು 14 ಕೋಟಿ ರೇಷನ್‌ ಕಿಟ್‌ಗಳನ್ನು ನೀಡುವುದು, 71 ನದಿ ತೀರಗಳನ್ನು ಸ್ವಚ್ಛಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಮುಂಚಿತವಾಗಿ ಮಾಡಿರುವ ಕಾರ್ಯಕ್ರಮಗಳು ಆಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಲಸಿಕೆಯ ಬಗ್ಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜೀವನ ಹಾಗೂ ಕಾರ್ಯಗಳನ್ನು ಪ್ರಚಾರ ಮಾಡುವುದು ಕೂಡಾ ಈ ಅಭಿಯಾನದ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ 71 ವರ್ಷ ಆಗುತ್ತಿರುವ ಹಿನ್ನೆಲೆ 71 ನದಿ ತೀರಗಳಲ್ಲಿ ಸ್ವಚ್ಛ ಕಾರ್ಯಕ್ರಮ ನಡೆಸುವುದು, ಸ್ಥಳೀಯ ಮಾಧ್ಯಮಗಳಲ್ಲಿ ಅಥವಾ ಭಾಷೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಸಾಹಿತಿಗಳ ಮಾತನ್ನು ಪ್ರಚಾರ ಮಾಡುವುದು ಮೊದಲಾದ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜಿಸಿದೆ.

(ಒನ್‌ ಇಂಡಿಯಾ ಸುದ್ದಿ)

English summary
Millions of people observed the day as National Unemployment Day in order to flag the issue of severe unemployment on Narendra Modi birthday.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X