ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಪ್ರಯಾಣಿಸುತ್ತೀರಾ? ನೀವು ತಿಳಿದುಕೊಳ್ಳಬೇಕಾದ ವಿಷಯಗಳು

|
Google Oneindia Kannada News

ನವದೆಹಲಿ ಡಿಸೆಂಬರ್ 01: ನೀವು ಅಪಾಯದಲ್ಲಿರುವ ದೇಶಗಳಿಂದ ಅಥವಾ ಇನ್ಯಾವುದೋ ದೇಶಗಳಿಂದ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದರೆ ಮತ್ತು ಭಾರತೀಯ ವಿಮಾನ ನಿಲ್ದಾಣದಲ್ಲಿ ದೀರ್ಘ ಕಾಲದವರೆಗೆ ಕಾಯುವಿಕೆಯ ಬಗ್ಗೆ ಚಿಂತಿಸುತ್ತಿದ್ದರೆ, RTPCR ಪರೀಕ್ಷೆಗಾಗಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಒಂದು ಮಾರ್ಗವಿದೆ. ಆದರೆ ಅದಕ್ಕೆ ಹೆಚ್ಚು ಪಾವತಿಸಬೇಕಾಗುತ್ತದೆ.

ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಜನ ಸಾಲುಗಟ್ಟಿ ನಿಂತು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವದ 14 ರಾಷ್ಟ್ರಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೇಂದ್ರ ಸರ್ಕಾರ ಅಲ್ಲಿಂದ ಬರುವ ಪ್ರಯಾಣಿಕರಿಗೆ ಪರೀಕ್ಷೆಯನ್ನು ಇಂದಿನಿಂದ ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ನಡೆದು ಫಲಿತಾಂಶ ಬರಲು ಆರೇಳು ಗಂಟೆಗಳ ಕಾಲ ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಬೇಕಾಯಿತು.

ಪರೀಕ್ಷಾ ಕಿಟ್‍ಗಳು ದುಬಾರಿಯಾಗಿ ಪ್ರಯಾಣಿಕರು ಪೇಚಾಡುವಂತಾಗುತ್ತಿದೆ. ಇನ್ನೂ ಹಣ ಪಾವತಿಸಿದರೂ ಶೀಘ್ರವೇ ಫಲಿತಾಂಶ ಬರದೆ ವಿಳಂಬವಾಗುತ್ತಿದೆ. ಈ ನಡುವೆ ಪರೀಕ್ಷೆ ಇಲ್ಲದೆ ಬಂದವರಿಗೆ ಮತ್ತು ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಸಾಂಸ್ಥಿಕ ವಾಸ (ಕ್ವಾರಂಟೈನ್)ಕ್ಕೆ ಒಳಪಡಿಸಲಾಗುತ್ತಿದೆ. ಅದರ ವ್ಯವಸ್ಥೆಗಾಗಿ ಸಾಕಷ್ಟು ಸಮಯ ಹಿಡಿಯುತ್ತಿದೆ. ಹೀಗಾಗಿ ವಿದೇಶಗಳಿಂದ ಬಂದವರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾದು ಬಸವಳಿದಿದ್ದಾರೆ.

Traveling to India? Things you need to know

ಅಂದಹಾಗೆ RTPCR ಪರೀಕ್ಷೆಗಳಲ್ಲಿ ಎರಡು ವಿಧಗಳಿವೆ. ಒಂದು ಕ್ಷಿಪ್ರ RTPCR ಪರೀಕ್ಷೆ ಮತ್ತು ನಿಯಮಿತ RTPCR ಪರೀಕ್ಷೆ. ಕ್ಷಿಪ್ರ RTPCR ಪರೀಕ್ಷೆಯು ನಿಮಗೆ ಫಲಿತಾಂಶಗಳನ್ನು ನೀಡಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಸಾಮಾನ್ಯ RTPCR ಪರೀಕ್ಷೆಯು ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ಇಲ್ಲಿ ವೆಚ್ಚವೂ ಬದಲಾಗುತ್ತದೆ.

ಕ್ಷಿಪ್ರ RTPCR ಪರೀಕ್ಷೆಗೆ ಪ್ರತಿ ವ್ಯಕ್ತಿಗೆ 3,900 ರೂ. ಸಾಮಾನ್ಯ ಪರೀಕ್ಷೆಗೆ ಪ್ರತಿ ವ್ಯಕ್ತಿಗೆ 500 ರೂ. ನೀವು ನಾಲ್ಕು ಜನರ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರೆ ತ್ವರಿತ RTPCR ಗೆ ಹೆಚ್ಚು ವೆಚ್ಚವಾಗಬಹುದು. ಕ್ಷಿಪ್ರ RTPCR ಮಾಡಿಸಿದರೆ ನಾಲ್ಕು ಜನರಿಗೆ ಅದರ ವೆಚ್ಚ 15,600 ರೂ.ರಷ್ಟಾಗುತ್ತದೆ. ಆದರೆ ಸಾಮಾನ್ಯ ಪರೀಕ್ಷೆಗೆ ನಾಲ್ಕು ಸದಸ್ಯರಿಗೆ 2,000 ರೂ. ಆಗುತ್ತದೆ. ಹಣ ಪಾವತಿಸಿದಂತೆ ಕಾಯುವ ಸಮಯ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಆಯ್ಕೆ ಪ್ರಯಾಣಿಕರದ್ದಾಗಿರುತ್ತದೆ. ತುರ್ತು ಕಾರ್ಯಗಳಿಗಾಗಿ ಆಗಮಿಸುವವರಿಗೆ ಇದೂ ಕೂಡ ಕೊಂಚ ಕಿರಿಕಿರಿಯಾಗಬಹುದು.

ಹೀಗಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸುತ್ತಿರುವ ಜೆನೆಸ್ಟ್ರಿಂಗ್ಸ್ ಡಯಾಗ್ನೋಸ್ಟಿಕ್ಸ್‌ನ ಉಪಾಧ್ಯಕ್ಷ ಡಾ ಅಲ್ಪನಾ ರಜ್ದಾನ್ ಅವರು ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. "ನಾವು ರಾತ್ರಿಯ ಸಮಯದಲ್ಲಿ 1500 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸುತ್ತೇವೆ. ಆದರೆ ನಾವು ಸಮಯದ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. 6 ಗಂಟೆ ತೆಗೆದುಕೊಳ್ಳುವ ಪರೀಕ್ಷೆ, ನಾವು ಅದನ್ನು 4 ಗಂಟೆಗಳಿಗೆ ಇಳಿಸಲು ಪ್ರಯತ್ನಿಸಿದ್ದೇವೆ, "ಎಂದು ಅವರು ಹೇಳಿದರು. ಪರೀಕ್ಷೆಯ ನಂತರ, ಒಬ್ಬರು ಅಪಾಯದಲ್ಲಿರುವ ದೇಶದಿಂದ ಬಂದರೆ 14 ದಿನಗಳವರೆಗೆ ಕ್ವಾರಂಟೈನ್ ಮಾಡಬೇಕು. ಅಂತಾರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿಗಳಂತೆ ಅನುಸರಿಸಬೇಕಾದ ವಿವಿಧ ರಾಜ್ಯಗಳಿಂದ ವಿವಿಧ ರೀತಿಯ ಕ್ವಾರಂಟೈನ್ ಪ್ರೋಟೋಕಾಲ್‌ಗಳಿವೆ.

ಇನ್ನೂ ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣದಲ್ಲಿ ಇಂದಿನಿಂದಲೇ ಕಡ್ಡಾಯ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದೇಶದಿಂದ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಡುವ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಿ ಅಲ್ಲಿ ಅವರನ್ನು ಏಳು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

English summary
If you are an international traveler arriving from at risk countries or otherwise and are worried about the long wait at an Indian airport, there is a way to avoid the long queues for an RTPCR test; pay more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X