• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ವರಂಗ ಜೈನ‌ ಬಸದಿಯ ಪ್ರವಾಸಿಗರಿಗೆ ಬೇಕಿದೆ ಸುರಕ್ಷತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್‌, 12: ಕರಾವಳಿ ವೈವಿಧ್ಯಮಯ ಆಚರಣೆಯ ಜೊತೆಗೆ ಪ್ರಕೃತಿ ಸೌಂದರ್ಯದ ಗಣಿಯೂ ಆಗಿದೆ. ಕರಾವಳಿ ಉದ್ದಕ್ಕೂ ಹತ್ತು ಹಲವು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತವೆ. ಒಂದೆಡೆ ವಿಶಾಲವಾದ ಸಮುದ್ರ, ಮತ್ತೊಂದೆಡೆ ಪರ್ವತ ಶ್ರೇಣಿಗಳ ಸಾಲುಗಳು ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಮೋಡಿ ಮಾಡಿ ತನ್ನತ್ತ ಸೆಳೆದೇ ಬಿಡುತ್ತದೆ. ಹಾಗೆಯೇ ಉಡುಪಿ ಜಿಲ್ಲೆಯ ಪ್ರವಾಸಿ ತಾಣ ವರಂಗ ಜೈನ ಬಸದಿಯೂ ಕೂಡ ಪ್ರಖ್ಯಾತಿ ಪಡೆದಿದ್ದು, ಪ್ರವಾಸಿ ತಾಣಗಳಲ್ಲಿ ಇದು ಒಂದು ಪ್ರಮುಖವಾದ ತಾಣವಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿರುವ ವರಂಗ ಜೈನ ಬಸದಿ ಸೌಂದರ್ಯವನ್ನು ಸವಿಯಲು ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿದೆ ಬರುತ್ತಾರೆ. 14 ಎಕರೆ ವಿಸ್ತಾರದ ಕರೆಯ ಮಧ್ಯದಲ್ಲಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿಯೇ ವರಂಗ ಜೈನ ಬಸದಿ ಆಗಿದೆ. ಮುಂಗಾರು ಮಳೆ-2 ಚಿತ್ರದಲ್ಲೂ ಕಂಡುಬಂದಿರುವ ಈ ಬಸದಿಯ ಸೌಂದರ್ಯವನ್ನು ನೋಡಿಯೇ ಎಷ್ಟೋ ಜನರು ಇಲ್ಲಿಗೆ ಬರುತ್ತಿದ್ದಾರೆ. ವರಂಗ ಜೈನ ಬಸದಿಯಲ್ಲಿರುವ ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯ ಮೂಲಕವೇ ಹೋಗಬೇಕಿದೆ.

ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್

ಪದ್ಮಾವತಿ ದೇವಿ ಬಸದಿಯ ಪ್ರಮುಖ ಶಕ್ತಿ

ಪದ್ಮಾವತಿ ದೇವಿ ಬಸದಿಯ ಪ್ರಮುಖ ಶಕ್ತಿ

ಬೇರೆ ಯಾವುದೇ ಪರ್ಯಾಯ ದಾರಿ ಇಲ್ಲದೇ ಮಳೆ, ಬೇಸಿಗೆ ಕಾಲದಲ್ಲೂ ದೋಣಿಯ ಮೂಲಕವೇ ಈ ಜಾಗಕ್ಕೆ ಕ್ರಮಿಸಬೇಕಾಗುತ್ತದೆ. ದೋಣಿ ಪ್ರಯಾಣ ಒಂದು ರೀತಿಯ ಇಂಪು ಕೊಡುತ್ತದೆ. ಹೀಗಾಗಿಯೇ ಜೈನ ಬಸದಿ ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿದೆ. ಬಸದಿಯಲ್ಲಿ ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳಿವೆ. ಪದ್ಮಾವತಿ ದೇವಿಯೇ ಬಸದಿಯ ಪ್ರಮುಖ ಶಕ್ತಿ ಆಗಿದೆ. ಈ ಬಸದಿಯನ್ನು 12ನೇ ಶತಮಾನದಲ್ಲಿ ಆಳುಪ ವಂಶಸ್ಥೆಯ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆ ಎಂಬ ಉಲ್ಲೇಖ ಇದೆ.

ದಡದಿಂದ ಬಸದಿಗೆಗೆ ತಲುಪಲು ಪ್ರತಿ ಪ್ರವಾಸಿಗನಿಂದ ತಲಾ 25ರೂಪಾಯಿಯನ್ನು ಸ್ವೀಕರಿಸಲಾಗುತ್ತದೆ. ಸುಮಾರು ಹತ್ತು ಅಡಿಗೂ ಹೆಚ್ಚು ಆಳವಿರುವ ಕೆರೆಯನ್ನು ದೋಣಿ ಮೂಲಕವೇ ಸಾಗಬೇಕು. ಒಂದು ಸಾರಿ ದೋಣಿಯಲ್ಲಿ 15 ಮಂದಿ ಜನರು ಪ್ರಯಾಣಿಸಬಹುದಾಗಿದೆ. ರಜಾ ದಿನಗಳಲ್ಲಿ ನೂರಾರು ಜನರು ವರಂಗ ಜೈನ ಬಸದಿಯ ಸುಂದರ ನೋಟವನ್ನು ಸವಿಯಲು ಜನಸಾಗರವೇ ಹರಿದು ಬರುತ್ತದೆ. ದೋಣಿ ಸಂಚಾರ ರೋಚಕವಾದರೂ ಸುರಕ್ಷತೆ ಇಲ್ಲದಿರುವುದು ಮಾತ್ರ ಆತಂಕಕಾರಿ ವಿಚಾರವಾಗಿದೆ.

ಲೈಫ್ ಜಾಕೆಟ್‌ ವ್ಯವಸ್ಥೆಗೆ ಇತ್ತಾಯ

ಲೈಫ್ ಜಾಕೆಟ್‌ ವ್ಯವಸ್ಥೆಗೆ ಇತ್ತಾಯ

ದೋಣಿ ಸಂಚಾರದ ಸಂಧರ್ಭದಲ್ಲಿ ಪ್ರವಾಸಿಗರನ್ನು ಜೀವಭಯಲ್ಲಿ ಸಾಗುವಂತಾಗಿದೆ. ದುರಾದೃಷ್ಟವಶಾತ್ ದುರಂತ ಏನಾದರೂ ಆದರೆ, ಭಾರಿ ಪ್ರಮಾಣದ ಸಾವು-ನೋವು ಸಂಭವಿಸುವ ಸಾಧ್ಯತೆಗಳೂ ಇದೆ. ಹೀಗಾಗಿ ಬಸದಿಯ ನೇತೃತ್ವ ವಹಿಸಿದವರು ದೋಣಿ ಸಂಚಾರ ಮಾಡುವವರಿಗೆ ಲೈಫ್ ಜಾಕೆಟ್‌ ವ್ಯವಸ್ಥೆ ಮಾಡಲಿ ಅನ್ನುವುದು ಬೆಂಗಳೂರು ಮೂಲದ ಪ್ರವಾಸಿಗರಾದ ಶ್ರುತಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪದ್ಮಾವತಿ ದೇವಿ ಬಗ್ಗೆ ಭಕ್ತರ ಅಭಿಪ್ರಾಯ

ಪದ್ಮಾವತಿ ದೇವಿ ಬಗ್ಗೆ ಭಕ್ತರ ಅಭಿಪ್ರಾಯ

ವರಂಗ ಬಸದಿ ಜೈನ ಕ್ಷೇತ್ರವಾದರೂ ಅನ್ಯಧರ್ಮೀಯ ಭಕ್ತರೇ ಅತೀ ಹೆಚ್ಚು ಈ ಕ್ಷೇತ್ರಕ್ಕೆ ಬರುತ್ತಾರೆ. ನೀರಿನ ಮಧ್ಯೆ ಕುಳಿತ ಪದ್ಮಾವತಿ ದೇವಿ ಇಷ್ಟಾರ್ಥ ಸಿದ್ಧಿ ಮಾಡುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ ಆಗಿದೆ. ಕಂಕಣ‌ಭಾಗ್ಯ, ಚರ್ಮ ರೋಗ ಸೇರಿದಂತೆ ಹಲವು ಕಷ್ಟ ಕಾರ್ಪಣ್ಯಗಳಿಗೆ ಇಲ್ಲಿ ಹರಕೆ ಕಟ್ಟಿಕೊಂಡರೆ ನೆರವೇರುತ್ತವೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಮಧ್ಯಪ್ರದೇಶದಲ್ಲಿ ಈ ರೀತಿಯ ಕೆರೆ ಬಸದಿ ಇದೆ. ಬಳಿಕ ಇಡೀ ದೇಶದಲ್ಲಿ ಇಂತಹ ಸೌಂದರ್ಯವನ್ನು ವರಂಗ ಬಸದಿಯಲ್ಲಿ ಕಾಣಬಹುದಾಗಿದೆ.

ಪ್ರವಾಸಿಗರ ನೆಚ್ಚಿನ ತಾಣವಾದ ಬಸದಿ

ಪ್ರವಾಸಿಗರ ನೆಚ್ಚಿನ ತಾಣವಾದ ಬಸದಿ

ವರಂಗ ಬಸದಿಗೆ ಸೇತುವೆಯೊಂದನ್ನು ಕಟ್ಟುವ ಪ್ರಸ್ತಾವವಿದ್ದರೂ, ಬಳಿಕ ಅದನ್ನು ಕೈಬಿಡಲಾಗಿದೆ. ವರಂಗ ಇರುವುದು ಉಡುಪಿ ಜಿಲ್ಲೆಯ ಕಾರ್ಕಳದಿಂದ ಸುಮಾರು 25 ಕಿಲೋ ಮೀಟರ್‌, ಉಡುಪಿಯಿಂದ 37 ಕಿಲೋ ಮೀಟರ್‌, ಮಂಗಳೂರಿನಿಂದ 85 ಕಿಲೋ ಮೀಟರ್‌ ದೂರದಲ್ಲಿ ಈ ವರಂಗ ಬಸದಿ ಇದೆ. ಒಟ್ಟಿನಲ್ಲಿ ಅದ್ಭುತ ಸೌಂದರ್ಯದ ಆಗರವಾಗಿರುವ ವರಂಗ ಬಸದಿ ಸಾವಿರಾರು ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿದೆ. ಆದರೂ ಪ್ರವಾಸಿಗರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವುದು ಉತ್ತಮವಾಗಿದೆ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ ಆಗಿದೆ.

English summary
Varanga Jain Basadi in Udupi district very famous tourist spot, tourists travel by boat. tourists opinion that life jackets should be arranged know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X