ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಮಳೆ ಜೊತೆಗೆ ಪ್ರವಾಸ, ಕರ್ನಾಟಕದ 5 ಸ್ಥಳಗಳು

By ಆನಂದ್ ದೊರೈ ರಾಜ್, ಸವಾರಿ
|
Google Oneindia Kannada News

ಕರ್ನಾಟಕದಲ್ಲಿ ಮಾನ್ಸೂನ್ ಪ್ರಾರಂಭವಾದರೆ ರೋಡ್ ಟ್ರಿಪ್‌ಗಳ ಮುಖಾಂತರ ಸುಂದರವಾದ ಭೂದೃಶ್ಯವನ್ನು ಅನ್ವೇಷಿಸಲು ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಉತ್ತಮ ಸಮಯವಾಗಿರುತ್ತದೆ.

ಮಳೆ ಕರ್ನಾಟಕದ ಪ್ರವಾಸಿ ತಾಣವನ್ನು ಎಲ್ಲಾ ರೀತಿಯ ಭೂಭಾಗವನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಅದರ ಸಂಪೂರ್ಣ ಅಕರ್ಷಕ ವಿಭಿನ್ನ ಭಾಗವನ್ನು ಹೊರತರುತ್ತದೆ - ಪರ್ವತಗಳನ್ನು ಹಸಿರು ಜಮಖಾನ ಹಾಸಿದಂತೆ, ರಜತ ಮುತ್ತು ರತ್ನಹಾಸಿದ ಮಂಜು, ಹೇರಳವಾಗಿ ರಜತದಂತೆ ನೀರಿನಿಂದ ಹೊಳೆಯುವ ಜಲಪಾತಗಳು ಮತ್ತು ಸರೋವರಗಳು, ಜಲಾವೃತವಾದ ಮರಗಳು ಎಲೆಗಳು ಹೂವು ಹಣ್ಣುಗಳು ಭೂಪ್ರದೇಶಗಳು ಮತ್ತು ಮಳೆ, ಭೂಮಿ ಹಸಿರು ತಾಣಗಳು, ಎಲೆ, ಹೂವು ಹಣ್ಣುಗಳ ಪರಿಮಳ, ಪರ್ವತ ಆಕಾಶದಲ್ಲಿ ಮೂರು ಕಾಲ ಬೆಳಿಗ್ಗೆ ಮಧ್ಯಾಹ್ನ ಮತ್ತು ಸಾಯಂಕಾಲಗಳಲ್ಲಿ ಕಾಣ ಸಿಗುವ ಪರಿವರ್ತನಾ ಬೂದು ಮತ್ತು ನೀಲಿ ಛಾಯೆಗಳ ನಡುವೆ ಪರ್ಯಾಯವಾಗಿ, ಸುತ್ತಲೂ ಹಚ್ಚ ಹಸಿರಿನ ಪರಿಸರ ಇವು ಕರ್ನಾಟಕದ ಮಾನ್ಸೂನ್ ಚಿತ್ರಣ. ಈ ಋತುವು ನಿಮ್ಮನ್ನು ಹೊರಗೆ ಬಂದು ಅದ್ಭುತ ಪ್ರಕೃತಿಯ ತೋಳುಗಳಲ್ಲಿ ವಿರಮಿಸುವಂತೆ ಕೈ ಬೀಸಿ ಕರೆಯುತ್ತಿದೆ.

ಲೌಕಿಕ ಹಾಗೂ ಎಲ್ಲಾ ರೀತಿಯ ಮಾಲಿನ್ಯದಿಂದ ಹೊರತಾಗಿ, ನಗರ ಜೀವನದಿಂದ ದೂರದಲ್ಲಿ ಮಾನ್ಸೂನ್ ವಿಹಾರವನ್ನು ನಿಮ್ಮ ಮನಸ್ಸು ಬಯಸಿದರೆ, ಈ ಋತುವಿನಲ್ಲಿ ಮಲೆನಾಡು/ಉತ್ತರ ಕನ್ನಡ/ಉತ್ತರ ಕರ್ನಾಟಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು 5 ವಿಶಿಷ್ಟ ಹಾಗೂ ನಂಬಲಾಗದ ಸ್ಥಳಗಳಿಗೆ ಉನ್ನತ ಆಯ್ಕೆಗಳು ಇಲ್ಲಿವೆ:

ಚಾರ್ಮಾಡಿ ಘಾಟ್

ಚಾರ್ಮಾಡಿ ಘಾಟ್

ಪ್ರಯಾಣ ವರ್ಗ: ಪರ್ವತ ಶ್ರೇಣಿ : ಚಿಕ್ಕಮಗಳೂರು ಬಳಿ ಈ ಅಮೂಲ್ಯ ಗುಪ್ತ ಪ್ರವಾಸಿ ರತ್ನದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಚಿಕ್ಕಮಗಳೂರರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚಾರ್ಮಾಡಿ ಘಾಟ್ ಪ್ರಾಚೀನ ಪಶ್ಚಿಮ ಘಟ್ಟದಲ್ಲಿ 25 ಕಿ.ಮೀ ನಿಂದ ವಿಸ್ತಾರವಾಗಿದೆ, ಇದು ಕೊಟ್ಟಿಗೇಹಾರ ದಿಂದ ಪ್ರಾರಂಭವಾಗಿ ಆಕರ್ಷಕ ಚಾರ್ಮಡಿ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ.

ಮಳೆಗಾಲದಲ್ಲಿ ಹಸಿರು ಘಾಟ್ ಗುಡ್ಡ ಪ್ರದೇಶಗಳು ಮತ್ತು ಅದರ ಕಾಲೋಚಿತ ಜಲಪಾತಗಳು ಪ್ರಾಣಿ ಪಕ್ಷಿಗಳು ಜೀವಂತವಾಗಿ ಕಾಣ ಬರುತ್ತವೆ, ಏಕೆಂದರೆ ಈ ಪ್ರದೇಶದಲ್ಲಿ 7000 ಮಿ.ಮೀ. ಮಳೆಯಾಗುತ್ತವೆ. ಈ ತಿಂಗಳುಗಳಲ್ಲಿ ಅಲ್ಲಲ್ಲಿ ಕಾಣ ಸಿಗುವ ಸಣ್ಣ ಸಣ್ಣ ಝರಿಗಳು, ಹಾರಾಡುವ ಚಿತ್ರ ವಿಚಿತ್ರ ಬಣ್ನ ಬಣ್ಣದ ಪಕ್ಷಿಗಳುಅದರ ಕಲರವಗಳು, ಜಲಪಾತಗಳು ಮತ್ತು ಸೊಂಪಾದ ಪಕ್ಷಿಗಳ ಹಾರಾಟಗಳು ಈ ಹಸಿರು ದಟ್ಟವಾದ ಸಮೃದ್ಧ ಕಾಡುಗಳಿಗೆ ಸಾಕ್ಷಿಯಾಗಬಹುದು.

ಚಾರ್ಮಡಿ ಘಾಟ್ ಪಕ್ಷಿ ಮತ್ತು ವನ್ಯಜೀವಿಗಳ ಸಂಶೋಧಕರು, ಛಾಯಾಗ್ರಾಹಕರು, ಪ್ರಾಣಿ-ಪಕ್ಷಿ ಹಾಗೂ ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಕಾಡುಹಂದಿ, ಭಾರತೀಯ ಕೋಗಿಲೆ, ಗಿಡುಗ ಮುಂತಾದ ವೈವಿಧ್ಯಮಯ ಅಪರೂಪದ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿನ ಸುಂದರವಾದ ಶಿಖರಗಳು ಮತ್ತು ಜಲಪಾತಗಳು ಸಹ ಆದರ್ಶ ಚಾರಣ ಮತ್ತು ಕ್ಯಾಂಪಿಂಗ್ ತಾಣವನ್ನಾಗಿ ಮಾಡುತ್ತವೆ.

ಪ್ರಮುಖ ಆಕರ್ಷಣೆಗಳು: ಬಲ್ಲರಾಯನದುರ್ಗ ದುರ್ಗ ಕೋಟೆ, ಬಂಡಾಜೆ ಆರ್ಬಿ ಜಲಪಾತಗಳು, ಮತ್ತು ಶಿಖರಗಳಂತಹ ಕೋಡೆಕಲ್ಲು ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಬಾಳೇಕಾಲು ಗುಡ್ಡ.

ಅಲ್ಲಿಗೆ ಹೋಗುವುದು ಹೇಗೆ : ಚಾರ್ಮಾಡಿ ಘಾಟ್ಗಳ ಸೌಂದರ್ಯವನ್ನು ರಸ್ತೆ ಪ್ರಯಾಣದಲ್ಲಿ ಉತ್ತಮವಾಗಿ ಸವಿಯ ಬಹುದು. ಬೆಂಗಳೂರಿನಿಂದ ಚಾರ್ಮಾಡಿಗೆ ಕ್ಯಾಬ್ ಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿ 6 ಗಂಟೆಗಳ ಪ್ರಯಾಣವನ್ನು ಆರಾಮವಾಗಿ ಆನಂದಿಸಬಹುದು.

ಶಿವನಸಮುದ್ರ

ಶಿವನಸಮುದ್ರ

ಪ್ರಯಾಣ ವಿಭಾಗ : ಜಲಪಾತ
ಬೆಂಗಳೂರಿನಿಂದ ದೀರ್ಘಕಾಲಿಕ ನೆಚ್ಚಿನ ಶಿವನಸಮುದ್ರವು ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಜಲಪಾತವಾಗಿದೆ. ಶಿವನಸಮುದ್ರದಲ್ಲಿ, ಭವ್ಯವಾದ ಜೀವನದಿ ಕಾವೇರಿ ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ, ಮತ್ತು ಬಂಡೆಗಳ ಕೆಳಗೆ ಗಗನಚುಕ್ಕಿ ಮತ್ತು ಭರಚುಕ್ಕಿಯಾಗಿ ಭೋರ್ಗರೆಯುತ್ತಾ ಎರಡು ಜಲಪಾತಗಳನ್ನು ಸೃಷ್ಟಿಸುತ್ತದೆ.

ಹತ್ತಿರದ ಹಜರತ್ ಮರ್ದನೆ ಗೈಬ್ ದರ್ಗಾ ಮತ್ತು ಶಿವನಸಮುದ್ರ ಕಾವಲು ಗೋಪುರದಿಂದ ಧುಮ್ಮಿಕ್ಕುವ ಜಲಪಾತಗಳ ವಿಹಂಗಮ ನೋಟಗಳು ಖಂಡಿತವಾಗಿಯೂ ಕಣ್ಣುಗಳಿಗೆ ರಸದೌತಣ ನೀಡುತ್ತವೆ. ಶಿವನಸಮುದ್ರವು ವರ್ಷವಿಡೀ ಪ್ರವಾಸಿಗರನ್ನು ಸ್ವಾಗತಿಸಿದರೆ, ಕಾವೇರಿಯು ಉಬ್ಬಿ ಜಲಪಾತಗಳ ಸೌಂದರ್ಯವನ್ನು ಹೆಚ್ಚಿಸುವುದರಿಂದ ಪ್ರವಾಸ ಕ್ಕೆ ಮಾನ್ಸೂನ್ ಗಳನ್ನು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.

ಈ ಸ್ಥಳಗಳನ್ನು ನೋಡದೇ ತಪ್ಪಿಸಿಕೊಳ್ಳಬೇಡಿ:
● ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಶಿವನಸಮುದ್ರ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯ
● ಜಲಪಾತದಿಂದ ಕೊರಾಕಲ್ ಸವಾರಿ ಮತ್ತು ಸಾಕಷ್ಟು ಬೆಟ್ಟ ಗುಡ್ಡ ಬಂಡೆಗಳಿಂದ ಭವ್ಯವಾದ ಮಂಜಿಗೆ ಸಾಕ್ಷಿಯಾಗಿದೆ.
ಅಲ್ಲಿಗೆ ಹೋಗುವುದು ಹೇಗೆ: ಶಿವನಸಮುದ್ರ ಬೆಂಗಳೂರಿನಿಂದ ಕೇವಲ 120 ಕಿ.ಮೀ ಪ್ರಯಾಣ. ಪಟ್ಟಣವನ್ನು ತಲುಪಲು ರಸ್ತೆ ಪ್ರಯಾಣವು ಅತ್ಯುತ್ತಮ ಮಾರ್ಗವಾಗಿದೆ.

ಹೊನ್ನಾವರ

ಹೊನ್ನಾವರ

ಪ್ರಯಾಣ ವಿಭಾಗ : ಹಿನ್ನೀರು ಮತ್ತು ಕಡಲತೀರಗಳು:
ವಾಣಿಜ್ಯೀಕರಣದಿಂದ ಇಂದೂ ಸಹ ದೂರ ಉಳಿದಿರುವ ಹೊನ್ನಾವರವು ಕರ್ನಾಟಕದ ಒಂದು ಸಣ್ಣ ಕರಾವಳಿ ಪಟ್ಟಣವಾಗಿದ್ದು, ಮಂಗಳೂರಿನಿಂದ 180 ಕಿ.ಮೀ ದೂರದಲ್ಲಿದೆ. ಇದು ಮೋಡಿ ಮಾಡುವ ಅಪ್ಸರಕೊಂಡ ಜಲಪಾತಕ್ಕೆ ನೆಲೆಯಾಗಿದೆ, ನೀವು ಎಂದಾದರೂ ಈ ನಗರಕ್ಕೆ ಭೇಟಿ ನೀಡುವ ಕನಸು ಕಂಡಿದ್ದರೆ ಅದರ ಬಾಲಿ ಕಂಪನಗಳಿಂದ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ! ಶ್ರೀಮಂತ ಇತಿಹಾಸ ಮತ್ತು ವೀಕ್ಷಣಾ ಸ್ಥಳಗಳ ಸಮೃದ್ಧಿಯಿಂದ ಆಶೀರ್ವದಿಸಲ್ಪಟ್ಟ ಹೊನ್ನಾವರಕ್ಕೆ ರಸ್ತೆ ಪ್ರಯಾಣವು ಅದರ ಸುಂದರವಾದ ಕಣಿವೆಗಳ ಕಡೆಗೆ ನಿಮ್ಮ ದೃಷ್ಟಿ ಹಾಯಿಸುತ್ತದೆ. ಶರಾವತಿ ಸೇತುವೆಯಿಂದ ಮರೆಯಲಾಗದ ಸೂರ್ಯಾಸ್ತ, ಮ್ಯಾಂಗ್ರೋವ್ ಕಾಡುಗಳು ಮತ್ತು ದ್ವೀಪಗಳು, ರಾಜ್ಯದ ಅತಿ ಉದ್ದದ ರೈಲ್ವೆ ಸೇತುವೆ ಮತ್ತು ತನ್ನದೇ ಆದ ಇಕೋ ಬೀಚ್ ನಿಂದ ಅರಬ್ಬಿ ಸಮುದ್ರದ ವಿಹಂಗಮ ನೋಟಗಳಿಂದ ನಿಮ್ಮನ್ನು ಬೆರಗುಗೊಳಿಸುತ್ತದೆ.

● ಹೊನ್ನಾವರದ ಶರಾವತಿ ನದಿಯಲ್ಲಿ ಜಲಸಿನಾ ಮೋಟೆ ಹಡಗು ಕಟ್ಟೆಗಳು, ಮಾವಿನ್ ಕುರ್ವೆ ಹಡಗು ಕಟ್ಟೆಗಳು ಅಥವಾ ಹೊನ್ನಾವರ ಬಂದರಿನಿಂದ ಹಿನ್ನೀರಿನ ಕಯಾಕಿಂಗ್ ಅನುಭವಕ್ಕಾಗಿ ನೀವು ಈಗಲೇ ಪ್ರವಾಸಕ್ಕೆ ಹೊರಡಿ.
● ಕ್ಯಾಬಾನಾ ಶೈಲಿಯ ಸನ್ ಶೇಡ್ ಗಳು, ಸ್ವಚ್ಚ ಹಳದಿ ಮರಳು ಮತ್ತು ವೈಡೂರ್ಯದಂತಹ ನೀರಿಗೆ ಹೆಸರುವಾಸಿಯಾಗಿದೆ.ಮತ್ತು ಟರ್ಕೋಯಿಸ್ ನೀರಿಗೆ ಹೆಸರುವಾಸಿಯಾದ ಇಕೋದ ವಿಸ್ತರಣೆಯಾದ ಕಸರ್ಕೋಡ್ ಬೀಚ್ ಗೆ ನೀವು ಭೇಟಿ ನೀಡಲೇ ಬೇಕು.
● ಅರಬ್ಬಿ ಸಮುದ್ರದೊಂದಿಗೆ ಶರಾವತಿಯ ಭೋರ್ಗರೆಯುವ ಸಂಗಮವನ್ನು ವೀಕ್ಷಿಸಲು ಬೆಟ್ಟದ ವರೆಗೆ ಚಾರಣ ಮಾಡಬೇಕು.
ಅಲ್ಲಿಗೆ ಹೋಗುವುದು ಹೇಗೆ: ಹೊನ್ನಾವರದಿಂದ ಮಂಗಳೂರು ವಿಮಾನ ನಿಲ್ದಾಣ ಹತ್ತಿರವಾಗಿದೆ . ಪ್ರವಾಸಿಗರು ಮಂಗಳೂರಿಗೆ ವಿಮಾನದಲ್ಲಿ ಹೋಗಬಹುದು ಮತ್ತು ನಂತರ ಹೊನ್ನಾವರಕ್ಕೆ ಸವಾರಿ ಕ್ಯಾಬ್ ಬಾಡಿಗೆಗೆ ಪಡೆಯಬಹುದು. ರಸ್ತೆಯ ಮೂಲಕ ದೂರವನ್ನು ಕ್ರಮಿಸಲು 3 ಗಂಟೆ 30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ದಾಂಡೇಲಿ

ದಾಂಡೇಲಿ

ಪ್ರಯಾಣ ವಿಭಾಗ: ಕಾಡುಗಳು:
ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ದಾಂಡೇಲಿ ಉತ್ತರ ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದೆ. ಈ ಚಿತ್ರ-ಪರಿಪೂರ್ಣ ಕುಗ್ರಾಮಕ್ಕೆ ಭೇಟಿ ನೀಡಲು ಮಾನ್ಸೂನ್, ಅತ್ಯುತ್ತಮ ಋತುಗಳಲ್ಲಿ ಒಂದಾಗಿದೆ, ಏಕೆಂದರೆ ಅದರ ಹಚ್ಚ ಹಸಿರು ಕಾಡುಗಳು ಮತ್ತು ಬೃಹತ್ ಹೊಲ, ಗದ್ದೆ, ತೋಟಗಳು, ವಿಶಿಷ್ಟವಾದ ಭತ್ತದ ಗದ್ದೆಗಳು ಪೂರ್ಣ ವಾಗಿ ಅರಳಿರುತ್ತವೆ. ದಾಂಡೇಲಿಯ ಕಾಡುಗಳು ಸಾಕಷ್ಟು ಚಾರಣ ಸ್ಥಳಗಳು, ಸುಂದರವಾದ ಜಲಪಾತಗಳು, ಐತಿಹಾಸಿಕ ದೇವಾಲಯಗಳು ಮತ್ತು ಕೋಟೆಗಳು, ಪ್ರಾಚೀನ ಗುಹೆಗಳು, ಅಪರೂಪದ ವನ್ಯಜೀವಿಗಳು ಮತ್ತು ಕಯಾಕಿಂಗ್, ವಾಟರ್ ಜೋರ್ಬಿಂಗ್, ರಾಫ್ಟಿಂಗ್ ಮತ್ತು ಹೆಚ್ಚಿನವುಗಳಂತಹ ಅನೇಕ ಜಲ ಕ್ರೀಡಾ ಆಯ್ಕೆಗಳನ್ನು ನೀಡುತ್ತವೆ. ಇದು ನೈಸರ್ಗಿಕ/ ಪರಿಸರವಾದಿಗಳು ಮತ್ತು ಸಾಹಸ ಸಂಶೋಧಕರಿಗೆ, ಛಾಯಾಗ್ರಾಹಕರಿಗೆ, ಅನ್ವೇಷಕರಿಗೆ ಒಂದು ಔತಣವಾಗಿದೆ.

ಪ್ರಮುಖ ಆಕರ್ಷಣೆಗಳು: ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಕಾಳಿ ನದಿ, ಸಾಥೋಡಿ ಜಲಪಾತ, ಶಿವಾಜಿ ಫೋರ್ಟ್, ದಾಂಡೆಲಪ್ಪ ದೇವಾಲಯ, ಸಿಂಥೆರಿ ಬಂಡೆಗಳು, ಕವಳ ಗುಹೆಗಳು, ಗಣೇಶಗುಡಿ.

ಅಲ್ಲಿಗೆ ಹೋಗುವುದು ಹೇಗೆ: ದಾಂಡೇಲಿಯಿಂದ 35 ಕಿ.ಮೀ ದೂರದಲ್ಲಿರುವ ಅಲ್ನಾವರ್ ಹತ್ತಿರದ ರೈಲು ನಿಲ್ದಾಣ ಇದೆ. ಕಾಡುಗಳನ್ನು ತಲುಪಲು ನೀವು ಸವಾರಿ ಕಾರನ್ನು ಬಾಡಿಗೆಗೆ ಪಡೆಯಬಹುದು . ಪರ್ಯಾಯವಾಗಿ, ನೀವು ಬೆಳಗಾವಿಗೆ ವಿಮಾನದಲ್ಲಿ ಪಯಣಿಸಬಹುದು ಮತ್ತು ಅಲ್ಲಿಂದ ದಾಂಡೇಲಿಗೆ ಟ್ಯಾಕ್ಸಿ ಕಾಯ್ದಿರಿಸಬಹುದು.

ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು

ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು

ಪ್ರಯಾಣ ವರ್ಗ: ಇತಿಹಾಸ ಮತ್ತು ಪರಂಪರೆ:
ಉತ್ತರ ಕರ್ನಾಟಕವು ಕ್ರಾಂತಿಕಾರರ, ಮಠಗಳು, ಪ್ರಾಚೀನ ಅವಶೇಷಗಳು, ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳ ನಿಧಿಯಾಗಿದೆ. ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಮೂರು ಐತಿಹಾಸಿಕ ಪಟ್ಟಣಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ಚಾಲುಕ್ಯರ ರಾಜವಂಶದ ಕೇಂದ್ರ ಬಿಂದು ಎಂದು ಕರೆಯಲ್ಪಡುವ ಬಾದಾಮಿ ಐಹೊಳೆ, ಮತ್ತು ಪಟ್ಟದಕಲ್ ನಲ್ಲಿರುವ ದೇವಾಲಯಗಳು ಭಾರತದ ಹಿಂದೂ ಶಾಸನಗಳು, ಬಂಡೆ ಚಿತ್ರಗಳು/ಕೆತ್ತನೆಗಳು, ಬಣ್ಣದ ಚಿತ್ರಗಳು ಮತ್ತು ದೇವಾಲಯದ ವಾಸ್ತುಶಿಲ್ಪದ ಜ್ವಲಂತ ಉದಾಹರಣೆಗಳಾದ ಸ್ಮಾರಕಗಳ ಆರಂಭಿಕ ತಾಣವಾಗಿವೆ.

ಹುಬ್ಬಳ್ಳಿಯಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಬಾದಾಮಿ, ಐಹೊಳೆ ಮತ್ತು ಪಟ್ಟದ ಕಲ್ಲುಗಳ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ. ಗುಹೆ ದೇವಾಲಯಗಳು ಮತ್ತು ಸ್ಮಾರಕಗಳು, ಬೆಟ್ಟ ಗುಡ್ಡಗಳು ಹಳ್ಳಿಗಾಡಿನ ಹೊಲ ಗದ್ದೆ, ತೋಟಗಳ ಸೌಂದರ್ಯವು ನಿಮ್ಮ ಹೃದಯವನ್ನು ಸುಲಭವಾಗಿ ಕದಿಯುತ್ತದೆ, ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಮಳೆ ಮರಳುಗಲ್ಲಿನ ವಾಸ್ತುಶಿಲ್ಪಗಳಿಗೆ ಗಮನಾರ್ಹ ಹೊಳಪನ್ನು ನೀಡುತ್ತದೆ. ಮಳೆ, ಪಟ್ಟಣಗಳ ಭೂದೃಶ್ಯವನ್ನು ಹಸಿರು ಬಣ್ಣಗಳಾಗಿ ಪರಿವರ್ತಿಸುತ್ತದೆ!

ಪ್ರಮುಖ ಆಕರ್ಷಣೆಗಳು: ಬಾದಾಮಿ ಗುಹಾ ದೇವಾಲಯ, ಮಾಲೆಗಿತ್ತಿ ಶಿವಾಲಯ ದ ಕೋಟೆ ಮತ್ತು ದೇವಾಲಯ, ಅಗಸ್ತ್ಯ ದೇವಾಲಯ, ದುರ್ಗಾ ದೇವಾಲಯ, ಪಟ್ಟದಕಲ್ಲಿನಲ್ಲಿ ಸ್ಮಾರಕಗಳ ಗುಂಪು, ಪಾಪನಾಥ ದೇವಾಲಯ ಇತ್ಯಾದಿ.

ಅಲ್ಲಿಗೆ ಹೋಗುವುದು ಹೇಗೆ: ದೇಶದ ಪ್ರಮುಖ ಮೆಟ್ರೋ ನಗರಗಳಿಗೆ ರೈಲ್ವೆ ಮೂಲಕ ಬಾದಾಮಿ ಉತ್ತಮ ಸಂಪರ್ಕ ಹೊಂದಿದೆ. ನೀವು ಬೆಂಗಳೂರಿನಿಂದ ವಿಮಾನ ತೆಗೆದುಕೊಳ್ಳಲು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಂತರ ಕ್ಯಾಬ್ ಸೇವೆ ಅಥವಾ ಬಾದಾಮಿಗೆ ರೈಲು ಬಾಡಿಗೆಗೆ ಪಡೆಯಬಹುದು.

Recommended Video

Pegasus ಫೋನ್ ನಲ್ಲಿ ಒಮ್ಮೆ ಇನ್ಸ್ಟಾಲ್ ಆದ್ರೆ ಏನೇನ್ ಮಾಡುತ್ತೆ? | How it Hacks into WhatsApp ? | Oneindia Kannada
ಕರ್ನಾಟಕದಲ್ಲಿ ಮಾನ್ಸೂನ್ ರಜಾದಿನ

ಕರ್ನಾಟಕದಲ್ಲಿ ಮಾನ್ಸೂನ್ ರಜಾದಿನ

ಕರ್ನಾಟಕದಲ್ಲಿ ಮಾನ್ಸೂನ್ ರಜಾದಿನದ ಆಯ್ಕೆಗಳ ಸಮೂಹದೊಂದಿಗೆ, ನಿಮ್ಮ ಕ್ವಾರಂಟೈನ್ ಆಯಾಸವನ್ನು ನಿವಾರಿಸಲು, ನೀವು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಆದಾಗ್ಯೂ, ಸಾಂಕ್ರಾಮಿಕದ ಎರಡನೇ ಅಲೆಯು ಈಗಷ್ಟೇ ಹಿಂದೆ ಸರಿಯುತ್ತಿರುವುದರಿಂದ ಮತ್ತು ಆರೋಗ್ಯ ಸುರಕ್ಷತೆಯನ್ನು ಪರಿಗಣಿಸುವುದು ಅತ್ಯಂತ ಮಹತ್ವದ್ದಾಗಿದೆ, ಈ ಸ್ಥಳಗಳನ್ನು ಅನ್ವೇಷಿಸಲು ಸುರಕ್ಷಿತ ಮತ್ತು ಉತ್ತಮ ಮಾರ್ಗವೆಂದರೆ ಅನುಭವಿ ಮತ್ತು ಸುರಕ್ಷಾ ನಿಯಮ ಪಾಲಿಸುವ ಸವಾರಿ ಕಾರ್ ರೆಂಟಲ್ಸ್ ಮೂಲಕ. ಅವರ ಅನುಭವಿ ಮತ್ತು ಸಭ್ಯ ಚಾಲಕರು, ದೇಶೀಯ ಪ್ರಯಾಣ ಮತ್ತು ರಸ್ತೆ ಪ್ರವಾಸದ ಪರಿಣತಿ ಮತ್ತು ಕರ್ನಾಟಕದ ಸಣ್ಣ ಮತ್ತು ನಗರಗಳಿಗೆ ಅತ್ಯುತ್ತಮ ಸಂಪರ್ಕದೊಂದಿಗೆ, ನೀವು ಸ್ಮರಣೀಯ ರಜೆಯ ಅನುಭವ ಪಡೆಯಲ್ಲಿದ್ದೀರಿ .

English summary
Popular Five travel destination in Karnataka to visit this Monsoon season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X