ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ ಧಾಮ್ ಯಾತ್ರಾರ್ಥಿಗಳಿಗೆ 1 ಲಕ್ಷ ರೂಪಾಯಿ ಜೀವ ವಿಮೆ

|
Google Oneindia Kannada News

ನವದೆಹಲಿ, ಜೂನ್ 15: ಉತ್ತರಾಖಂಡದಲ್ಲಿ ಇರುವ ಚಾರ್ ಧಾಮ್ ದೇವಾಲಯದ ಆವರಣದಲ್ಲಿ ಭಕ್ತರಿಗೆ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 1 ಲಕ್ಷ ರೂಪಾಯಿಗಳ ವಿಮೆಯನ್ನು ಒದಗಿಸಲು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (BKTC) ನಿರ್ಧರಿಸಿದೆ.

ಕಳೆದ ಮೇ 3 ರಂದು ಪ್ರಾರಂಭವಾದ ಚಾರ್ ದಾಮ್ ಯಾತ್ರೆಯ ಅವಧಿಯಲ್ಲಿ ಈಗಾಗಲೇ 91 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಯಾತ್ರೆಯ ಅಧಿಕಾರಿಗಳು ಮೇ 27ರಂದು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ವಿಡಿಯೋ: ಕೇದಾರನಾಥದಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ವಿಡಿಯೋ: ಕೇದಾರನಾಥದಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್

ಉತ್ತರಾಖಂಡದ ಆರೋಗ್ಯದ ಮಹಾನಿರ್ದೇಶಕಿ (ಡಿಜಿ) ಶೈಲ್ಜಾ ಭಟ್, ವರದಿಯಾದ ಸಾವಿನ ಹಿಂದಿನ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ಹೇಳಿದ್ದಾರೆ. ಚಾರ್ ಧಾಮ್ ಯಾತ್ರೆ ಮಾರ್ಗದಲ್ಲಿ 169 ವೈದ್ಯರನ್ನು ಹೆಚ್ಚುವರಿಯಾಗಿ ನಿಯೋಜಿಸುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

How Char Dham Yatra Devotees Will Now Get 1 Lakh Rupees Insurance Cover

ಚಾರ್ ಧಾಮ್ ಯಾತ್ರೆಗೆ ಹೊರಟವರು ಅಪಘಾತದಲ್ಲಿ ಸಾವು: ಜೂನ್ 5 ರಂದು, ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ ಯಾತ್ರಾರ್ಥಿಗಳಿದ್ದ ಬಸ್ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಆಳವಾದ ಪಾತಾಳಕ್ಕೆ ಬಿದ್ದ ಪರಿಣಾಮ ಸುಮಾರು 26 ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದರು. ಇದಲ್ಲದೆ, ಮೇ 30 ರಂದು ಕೇದಾರನಾಥ ಹೆಲಿಪ್ಯಾಡ್‌ನಲ್ಲಿ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅನಿಯಂತ್ರಿತವಾಗಿ ಲ್ಯಾಂಡಿಂಗ್ ಆಗಿತ್ತು.

19,04,253 ಯಾತ್ರಾರ್ಥಿಗಳಿಂದ ಚಾರ್ ಧಾಮ್ ಪ್ರವಾಸ: 19 ಲಕ್ಷಕ್ಕೂ ಹೆಚ್ಚು ಭಕ್ತರು ಚಾರ್ ಧಾಮ್ ಯಾತ್ರೆಯನ್ನು ಕೈಗೊಂಡಿದ್ದು, ಅದರಲ್ಲಿ ಒಟ್ಟು 19,04,253 ಯಾತ್ರಾರ್ಥಿಗಳು ಉತ್ತರಾಖಂಡ್ ಚಾರ್ ಧಾಮ್ -- ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ತಲುಪಿದ್ದಾರೆ. ಕಳೆದ ಮೇ 8 ರಿಂದ ಜೂನ್ 11ರ ಸಂಜೆಯವರೆಗೆ 6,57,547 ಯಾತ್ರಿಕರು ಬದರಿನಾಥ ಧಾಮವನ್ನು ತಲುಪಿದ್ದರೆ, ಮೇ 6ರಿಂದ ಜೂನ್ 11ರ ಸಂಜೆಯವರೆಗೆ 6,33,548 ಯಾತ್ರಿಕರು ಕೇದಾರನಾಥ ಧಾಮಕ್ಕೆ ಆಗಮಿಸಿದ್ದರು.

16,000 ಭಕ್ತರು ಬದರಿನಾಥಕ್ಕೆ ಭೇಟಿ: ಅದೇ ರೀತಿ ಮೇ 11ರಂದು ಉತ್ತರಾಖಂಡ ಸರ್ಕಾರವು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಯಾತ್ರಿಕರ ಸಂಖ್ಯೆಯನ್ನು ತಲಾ 1,000 ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿತ್ತು. ಒಂದು ದಿನದಲ್ಲಿ ಸುಮಾರು 16,000 ಭಕ್ತರು ಬದರಿನಾಥಕ್ಕೆ ಭೇಟಿ ನೀಡಬಹುದು. 13,000 ಜನರು ಕೇದಾರನಾಥ ಧಾಮದಲ್ಲಿ ದೇವರ ದರ್ಶನವನ್ನು ಪಡೆದಿರಬಹುದು, ಆದರೆ ಒಂದು ದಿನದಲ್ಲಿ ಕ್ರಮವಾಗಿ 8,000 ಮತ್ತು 5,000 ಯಾತ್ರಿಕರು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಬಹುದು.

English summary
How Char Dham Yatra Devotees will now get 1 lakh rupees insurance cover. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X