ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದ ಜಲಪಾತಗಳು ಹೊಸ ರೂಪ ಪಡೆಯಲಿವೆ: ಸಚಿವ

|
Google Oneindia Kannada News

ಪಣಜಿ ಆಗಸ್ಟ್ 10: ಗೋವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜಲಪಾತಗಳು ಪ್ರವಾಸಿಗರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವ ಮೂಲಕ ಹೊಸ ರೂಪ ಪಡೆಯಲಿವೆ ಎಂದು ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. ಗೋವಾವು ಹಲವಾರು ಜಲಪಾತಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಮಾನ್ಸೂನ್ ಸಮಯದಲ್ಲಿ ಸಕ್ರಿಯವಾಗುತ್ತವೆ.

"ಗೋವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸಲಿವೆ. ಪ್ರವೇಶ ದ್ವಾರದಲ್ಲಿ ನೋಂದಣಿ ಕೌಂಟರ್, ಪ್ರತಿ 500 ಮೀಟರ್‌ಗಳಲ್ಲಿ ಜೈವಿಕ ಶೌಚಾಲಯಗಳು, ಪಿಕ್ನಿಕ್ ತಾಣಗಳು ಮತ್ತು ಗುಂಪುಗಳ ಜೊತೆಯಲ್ಲಿ ಮಾರ್ಗದರ್ಶನ, ಜನರು ಜಲಪಾತಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ರಾಣೆ ಟ್ವೀಟ್ ಮಾಡಿದ್ದಾರೆ. ಅರಣ್ಯ ಇಲಾಖೆಯು ಜಲಪಾತಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರವಾಸಿಗರ ಅನುಭವವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಗೋವಾ ಸುಂದರವಾದ ಹಾಗು ಆಕರ್ಷಕವಾದ ನೈಟ್ ಪಾರ್ಟಿ, ಚರ್ಚ್, ಬೀಚ್ ಗಳು, ಮನಸೆಳೆಯುವ ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಎಂಥವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಗೋವಾ ಕಡಲತೀರಗಳು, ಪ್ರಾಚೀನವಾದ ಕಟ್ಟಡಗಳನ್ನು ಹೊರತುಪಡಿಸಿ, ಇಲ್ಲಿ ಸಹ್ಯಾದ್ರಿ ಬೆಟ್ಟಗಳ ನಡವೆ ಸುಂದರವಾದ ಭೂದೃಶ್ಯಗಳಿಂದ ಕೂಡಿದೆ. ಗೋವಾದಲ್ಲಿ ರಮಣೀಯವಾದ ಜಲಪಾತಗಳಿವೆ ಅವುಗಳ ಸೌಂದರ್ಯವನ್ನು ಸವಿಯಲು ಜನರು ಜೀವನದಲ್ಲಿ ಒಮ್ಮೆಯಾದರು ಗೋವಾಗೆ ಭೇಟಿ ನೀಡದಿರರು.

ಭಾರತದ 5ನೇ ಅತಿದೊಡ್ಡದಾದ ದೂಧ್ ಸಾಗರ್ ಜಲಪಾತ

ಭಾರತದ 5ನೇ ಅತಿದೊಡ್ಡದಾದ ದೂಧ್ ಸಾಗರ್ ಜಲಪಾತ

ಈ ಸುಂದರವಾದ ಜಲಪಾತವು ಗೋವಾ ಹಾಗು ಕರ್ನಾಟಕ ಗಡಿಯಲ್ಲಿದೆ. ಇದು ಗೋವಾದ ಅತ್ಯುತ್ತಮವಾದ ಹಾಗು ಸುಂದರವಾದ ಜಲಪಾತವಾಗಿದೆ. ಇದು ಮಾಂಡೋವಿ ಎಂಬ ನದಿಯಿಂದ ಹುಟ್ಟುತ್ತದೆ. ಅಲ್ಲದೇ, ದೂಧ ಸಾಗರ್ ಎಂದರೆ ಹಾಲಿನ ಸಾಗರ ಎಂದೇ ಆಗಿದೆ. ಇಲ್ಲಿನ ಆಕರ್ಷಕವಾದ ಜಲಪಾತವು ಹಾಲ್ನೊರೆಯಂತೆ ಸುಮಾರು 130 ಮೀಟರ್ ಎತ್ತರದಿಂದ ಧರೆಗೆ ಧುಮ್ಮಿಕ್ಕುತ್ತದೆ. ಈ ರಮಣೀಯವಾದ ಜಲಪಾತವು ಭಾರತದ ಐದನೇ ಅತಿದೊಡ್ಡದಾದ ಜಲಪಾತವಾಗಿದೆ.

ಗೋವಾದ ಸುಂದರವಾದ ಹರ್ವಾಲೆಮ್ ಜಲಪಾತ

ಗೋವಾದ ಸುಂದರವಾದ ಹರ್ವಾಲೆಮ್ ಜಲಪಾತ

ಗೋವಾದ ಸುಂದರವಾದ ಜಲಪಾತಗಳಲ್ಲಿ ಈ ಹರ್ವಾಲೆಮ್ ಜಲಪಾತವು ಒಂದು. ಇದು ಗೋವಾದ ಸ್ಯಾಂಕ್ವೆಲಿಮ್ ಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದೊಂದು ಭವ್ಯವಾದ ಜಲಪಾತವಾಗಿದ್ದು, ಸುತ್ತಮುತ್ತ ದಟ್ಟವಾದ ಹಸಿರಿನ ಮಧ್ಯೆ ಕಂಗೊಳಿಸುತ್ತದೆ. ಇದು ತನ್ನ ಪರ್ವತಗಳಿಂದ ಧರೆಗೆ ಸುಮಾರು 50 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದೊಂದು ಪಿಕ್ನಿಕ್ ತಾಣವಾಗಿದ್ದು, ಅನೇಕ ಪ್ರವಾಸಿಗರು ಈ ಜಲಪಾತಕ್ಕೆ ಭೇಟಿ ನೀಡಲು ಬಯಸುತ್ತಾರೆ. ಇಲ್ಲಿ ಜನಪ್ರಿಯವಾದ ಹಾಗು ನಿಮ್ಮ ಆಧ್ಯಾತ್ಮಿಕವನ್ನು ಹೆಚ್ಚಿಸುವ ರುದ್ರೇಶ್ವರ ದೇವಾಲಯವು ಕೂಡ ಇದೆ.

ಟ್ರೆಕ್ಕಿಂಗ್ ತಾಣ

ಟ್ರೆಕ್ಕಿಂಗ್ ತಾಣ

ಗೋವಾದ ಮತ್ತೊಂದು ಜನಪ್ರಿಯವಾದ ಜಲಪಾತವೆಂದರೆ ಅದು ಹಿವ್ರೆ ಜಲಪಾತವಾಗಿದೆ. ಇದು ಗೋವಾ ವಾಲ್ ಪೋಯ್ ನಗರ ದಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಹಿವ್ರೆ ಗ್ರಾಮದಲ್ಲಿ ಬೆಟ್ಟದ ಹಾದಿಯಲ್ಲಿ ನೆಲೆಗೊಂಡಿದೆ. ಈ ಮನೋಹರವಾದ ಜಲಪಾತಕ್ಕೆ ತೆರಳಲು ನೀವು ಬಯಸಿದರೆ, ಚಾರಣದ ಮಾರ್ಗದಿಂದಲೂ ತೆರಳಬಹುದು. ಅಂದರೆ, ಇದೊಂದು ಜನಪ್ರಿಯವಾದ ಟ್ರೆಕ್ಕಿಂಗ್ ತಾಣವಾಗಿದೆ.

ಕೇಸರ್ವಾಲ್ ಜಲಪಾತ

ಕೇಸರ್ವಾಲ್ ಜಲಪಾತ

ಸದಾ ಜಲಪಾತವು ಆಹ್ಲಾದಕರವಾದ ವಾತಾವರಣವನ್ನು ಹೊಂದಿದೆ. ಈ ಜಲಪಾತದವರೆಗೆ ನಡೆದುಕೊಂಡು ಹೋಗುವುದೇ ಮೋಡಿ ಮಾಡುವ ಅನುಭೂತಿಯನ್ನು ಉಂಟು ಮಾಡುತ್ತದೆ. ಇದು ಗೋವಾದ ಚೋರ್ಲಾ ಘಾಟ್ ಗಳಲ್ಲಿ ನೆಲೆಸಿದ್ದು, ಗೋವಾದ ಸಣ್ಣ ಹಳ್ಳಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಟ್ರೆಕ್ಕಿಂಗ್ ಮಾಡಬಯಸುವವರಿಗೆ ಇದೊಂದು ಉತ್ತಮವಾದ ಸ್ಥಳ ಎಂದೇ ಹೇಳಬಹುದು. ಸುತ್ತಮುತ್ತಲಿನ ವಾತಾವರಣ, ಜುಳು ಜುಳು ಶಬ್ಧ ಆಕಾಶದಿಂದ ಧರೆಗೆ ಇಳಿಯುತ್ತಿರುವ ಜಲಪಾತದ ಅನುಭವವು ನಿಮಗೆ ಸ್ವರ್ಗದ ಅನುಭವವನ್ನು ಉಂಟು ಮಾಡುತ್ತದೆ.

ಗೋವಾದ ಮತ್ತೊಂದು ರಮಣೀಯವಾದ ಜಲಪಾತವೆಂದರೆ, ಕೇಸರ್ವಾಲ್ ಜಲಪಾತ. ಇದು ವೆರ್ನಾ ಪ್ರಸ್ಥಭೂಮಿಯಲ್ಲಿ ನೆಲೆಗೊಂಡಿದೆ. ಗೋವಾದ ಪಣಜಿಯಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಈ ಜಲಪಾತ. ಸುತ್ತಮುತ್ತ ಅನೇಕ ತೋಟಗಳು, ದಟ್ಟವಾದ ಹಸಿರುಗಳಿಂದ ಕೂಡಿದ್ದು, ಗೋವಾದ ಜಲಪಾತ ಪ್ರಿಯರು ಈ ಜಲಪಾತದಲ್ಲಿ ಮಿಂದೇಳುತ್ತಾರೆ. ಹೀಗೆ ಸ್ನಾನ ಮಾಡುವುದರಿಂದ ಅನೇಕ ಚರ್ಮ ರೋಗಗಳು ಗುಣವಾಗುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಈ ಜಲಪಾಯದಲ್ಲಿ ಔಷಧಿಯ ಗುಣವನ್ನು ಹೊಂದಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ.

English summary
Goa Forest Minister Vishwajit Rane said that waterfalls in Goa and surrounding areas will get a makeover by providing new facilities to tourists. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X