ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಪ್ರವಾಸಿಗರಿಗೆ ಹೇಗೆ ಉಪಕಾರಿ ಈ "ಬೀಚ್ ವಿಜಿಲ್ ಆಪ್"?

|
Google Oneindia Kannada News

ಪಣಜಿ, ಜೂನ್ 4: ನೀವೂ ಗೋವಾ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡುತ್ತಿದ್ದೀರಾ. ಯೋಜನೆ ಹಾಕುತ್ತಿರುವವರಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೋವಾದ ಬೀಚ್‌ಗಳ ಸಮಗ್ರ ನಿರ್ವಹಣೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶೇಷವಾದ "ಬೀಚ್ ವಿಜಿಲ್ ಆಪ್" ಅನ್ನು ಪ್ರಾರಂಭಿಸಿದ್ದಾರೆ.

"ಬೀಚ್ ವಿಜಿಲ್ ಆ್ಯಪ್ ಬೀಚ್ ಟೂರಿಸಂ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಮತ್ತು ಪ್ರವಾಸಿಗರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತದೆ. ಪ್ರವಾಸೋದ್ಯಮ ವಲಯದೊಂದಿಗೆ ಮಾಹಿತಿ ತಂತ್ರಜ್ಞಾನದ ಸಹಯೋಗವು ಭವಿಷ್ಯದಲ್ಲಿ ಅನೇಕ ಮಾರ್ಗಗಳನ್ನು ತೆರೆಯುತ್ತದೆ," ಎಂದು ಅವರು ಹೇಳಿದ್ದಾರೆ. ಗೋವಾದ ಪ್ರವಾಸಿಗರಿಗೆ ಈ ಅಪ್ಲಿಕೇಶನ್ ಹೇಗೆ ಸಹಾಯಕವಾಗಿರಲಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕ್ಯಾರವಾನ್ ಟೂರಿಸಂ- ನೆರೆ ರಾಜ್ಯಗಳ ಪೈಪೋಟಿಯಲ್ಲಿ ಹಿಂದೆಬಿದ್ದ ಕರ್ನಾಟಕಕ್ಯಾರವಾನ್ ಟೂರಿಸಂ- ನೆರೆ ರಾಜ್ಯಗಳ ಪೈಪೋಟಿಯಲ್ಲಿ ಹಿಂದೆಬಿದ್ದ ಕರ್ನಾಟಕ

ಬೀಚ್ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿ

ಬೀಚ್ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿ

ಗೋವಾ ಅಂದ್ರೆ ಬೀಚ್, ಬೀಚ್ ಅಂದ್ರೆ ಗೋವಾ ಅನ್ನುವಷ್ಟು ಬೀಚ್ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿರುತ್ತದೆ. ಇಂಥ ಬೀಚ್ ವ್ಯವಸ್ಥೆಯನ್ನು ಸುಗಮ, ಸುಲಲಿತ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಅದೇ ನಿಟ್ಟಿನಲ್ಲಿ ಬೀಚ್ ಪರಿಸರವನ್ನು ವ್ಯವಸ್ಥಿತವಾಗಿ ಕಾಯ್ದುಕೊಳ್ಳುವುದಕ್ಕೆ ಇಂಥ ಅಪ್ಲಿಕೇಶನ್ ಸಹಕಾರಿಯಾಗಲಿದೆ. ಇದರ ಜೊತೆಗೆ "ಪ್ರವಾಸೋದ್ಯಮ ಮತ್ತು ಸುರಕ್ಷತೆಯ ಅಭಿವೃದ್ಧಿಯು ಸರ್ವಾಂಗೀಣ ಮತ್ತು ಸಾಮೂಹಿಕ ಪ್ರಯತ್ನವಾಗಿದೆ. ಈ ರೀತಿಯ ಅಪ್ಲಿಕೇಶನ್‌ಗಳೊಂದಿಗೆ, ಭವಿಷ್ಯದಲ್ಲಿ ಪರಿಸರ ವ್ಯವಸ್ಥೆಯು ವರ್ಧಿಸುತ್ತದೆ," ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದರು.

ಪ್ರವಾಸಿಗರ ಹಿತದೃಷ್ಟಿಯಿಂದ ಆಪ್ ಮೂಲಕ ದೂರು

ಪ್ರವಾಸಿಗರ ಹಿತದೃಷ್ಟಿಯಿಂದ ಆಪ್ ಮೂಲಕ ದೂರು

ಬೀಚ್ ವಿಜಿಲ್ ಆ್ಯಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋವಾದ ಐಟಿ ಮತ್ತು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಕೂಡ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು, ಹೊಸ ಆ್ಯಪ್ ಗೋವಾದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ದೃಷ್ಟಿ ಕಾರ್ಯಕರ್ತರು, ಪೊಲೀಸರು ಮತ್ತು ಇತರ ಮಾರ್ಗದರ್ಶಕರು ಸಮಸ್ಯೆಗಳನ್ನು ಇದರಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರು.

ಗೋವಾದಲ್ಲಿ ಬೀಚ್ ಸ್ವಚ್ಛಗೊಳಿಸಲು ಸಮಗ್ರ ಯೋಜನೆ

ಗೋವಾದಲ್ಲಿ ಬೀಚ್ ಸ್ವಚ್ಛಗೊಳಿಸಲು ಸಮಗ್ರ ಯೋಜನೆ

"ಗೋವಾ ಸರ್ಕಾರವು ಬೀಚ್ ಅನ್ನು ಸ್ವಚ್ಛಗೊಳಿಸುವುದಕ್ಕಾಗಿ ಸಮಗ್ರ ಯೋಜನೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಬೀಚ್ ವಿಜಿಲ್ ಅಪ್ಲಿಕೇಶನ್ ಅಕ್ರಮ ವ್ಯಾಪಾರಿಗಳು ಮತ್ತು ಅಕ್ರಮ ಮಸಾಜ್ ಸೇವೆಗಳನ್ನು ವರದಿ ಮಾಡುವುದರಿಂದ ಹಿಡಿದು ಬೀಚ್ ಶುಚಿತ್ವದವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ," ಎಂದು ಐಟಿ ಮತ್ತು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ತಿಳಿಸಿದರು.

ಸ್ಟಾರ್ಟ್‌ಅಪ್ ಯೋಜನೆಯಡಿ ಪ್ರೋತ್ಸಾಹ ನೀಡಿದ ಸಿಎಂ

ಸ್ಟಾರ್ಟ್‌ಅಪ್ ಯೋಜನೆಯಡಿ ಪ್ರೋತ್ಸಾಹ ನೀಡಿದ ಸಿಎಂ

ಗೋವಾದಲ್ಲಿ ಹೊಸದಾಗಿ ನೋಂದಾಯಿಸಿದ ಸ್ಟಾರ್ಟ್‌ಅಪ್‌ಗಳಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಮಾಣಪತ್ರಗಳನ್ನು ವಿತರಿಸಿದರು. ಇದೇ ವೇಳೆ ಸ್ಟಾರ್ಟ್‌ಅಪ್ ಯೋಜನೆಯಡಿಯಲ್ಲಿ ಪ್ರೋತ್ಸಾಹಧನವನ್ನು ವಿತರಿಸಿದರು. "ಐಟಿ ಸಚಿವರು ಸ್ಟಾರ್ಟ್ ಅಪ್ ನೀತಿಯನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಸ್ಟಾರ್ಟ್ ಅಪ್‌ಗಳಿಗೆ ಪ್ರಯೋಜನಕಾರಿ ಆಗಲಿದೆ ಎಂಬ ವಿಶ್ವಾಸವಿದೆ," ಎಂದು ಸಿಎಂ ಪ್ರಮೋದ್ ಸಾವಂತ್ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.

ಗೋವಾ ಸರ್ಕಾರವು 2025ರ ವೇಳೆಗೆ ಏಷ್ಯಾದಲ್ಲಿ ಟಾಪ್ 25 ಸ್ಟಾರ್ಟ್-ಅಪ್‌ಗಳ ತಾಣಗಳಲ್ಲಿ ಕರಾವಳಿ ರಾಜ್ಯ ಗೋವಾವನ್ನೂ ಸೇರುವಂತೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವ ಖೌಂಟೆ ಹೇಳಿದರು.

Recommended Video

ಕಾಶ್ಮೀರದ ಮತ್ತೊಂದು ಮುಖ | OneIndia Kannada

English summary
Goa Chief Minister Pramod Sawant Launches "Beach Vigil App": Know How its Helps to tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X