ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್‌ಗೆ ಹೋಗಲು ಬಯಸುವ ಭಾರತೀಯರಿಗೆ ಕೇವಲ 1200 ರೂಪಾಯಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಎರಡೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಭೂತಾನ್ ಇದೀಗ ಮತ್ತೊಮ್ಮೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ತನ್ನ ಗಡಿಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿರುವ ಭೂತಾನ್ ಪರಿಷ್ಕೃತ ಪ್ರವಾಸೋದ್ಯಮ ದರದೊಂದಿಗೆ ತೆರೆದುಕೊಂಡಿದೆ. ಪ್ರವಾಸಿಗರಿಗೆ ದೇಶದ ಬಾಗಿಲು ತೆರೆದಿರುವ ಭೂತಾನ್, ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು ಪರಿಚಯಿಸಿದೆ. ಅದರ ಪ್ರಕಾರ, ಕಳೆದ ಮೂರು ದಶಕಗಳಿಂದ ವಿದೇಶಿ ಪ್ರವಾಸಿಗರಿಗೆ ವಿಧಿಸುತ್ತಿದ್ದ 65 ಡಾಲರ್ ಭೂತಾನ್ ತನ್ನ ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು 200ಕ್ಕೆ ಹೆಚ್ಚಿಸಲಾಗಿದೆ.

ಪ್ರವಾಸಿಗರಿಗೆ ಸಿಹಿ ಸುದ್ದಿ: ಸೆಪ್ಟೆಂಬರ್ 23ರಿಂದ ಭಾರತ-ಭೂತಾನ್ ಗಡಿ ಓಪನ್ಪ್ರವಾಸಿಗರಿಗೆ ಸಿಹಿ ಸುದ್ದಿ: ಸೆಪ್ಟೆಂಬರ್ 23ರಿಂದ ಭಾರತ-ಭೂತಾನ್ ಗಡಿ ಓಪನ್

ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲು ಭಾರತೀಯರಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುತ್ತಿರಲಿಲ್ಲ. ಆದರೆ ಈಗ ಅದೇ ಭಾರತೀಯರು 1200 ರೂಪಾಯಿ ಮೊತ್ತವನ್ನು ಪಾವತಿಸಬೇಕೆಂದು ನಿಯಮಗಳು ಸೂಚಿಸುತ್ತವೆ. ಆದರೆ, ಭಾರತೀಯ ಪ್ರವಾಸಿಗರಿಗೆ ಪರಿಷ್ಕೃತ ಶುಲ್ಕವನ್ನು ಜಾರಿಗೆ ತರಲೇ ಇಲ್ಲ.

After 2 Years Bhutan Opens For Tourists, 1200 rupees Per Day Fee For Indians

2020ರ ಮಾರ್ಚ್ ತಿಂಗಳಿನಲ್ಲಿ ಗಡಿ ಬಂದ್:
ಕಳೆದ ಮಾರ್ಚ್ 2020ರಲ್ಲಿ, ಭೂತಾನ್ ತನ್ನ ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣವನ್ನು ಪತ್ತೆ ಮಾಡಿತು. ತದನಂತರ ಪ್ರವಾಸಿಗರು ತಮ್ಮ ಗಡಿಯನ್ನು ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಯಿತು. ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯದ ಮೂಲವಾಗಿಸಿಕೊಂಡಿರುವ ರಾಷ್ಟ್ರಕ್ಕೆ ಅದು ಭಾರೀ ಪೆಟ್ಟು ಕೊಟ್ಟಿತು.
8,00,000 ಕ್ಕಿಂತ ಕಡಿಮೆ ಜನರಿರುವ ಭೂತಾನ್ ನೆಲದಲ್ಲಿ 61,000 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ ಭೂತಾನ್ ಆರ್ಥಿಕತೆಯು ಕಳೆದ ಎರಡು ವರ್ಷಗಳಲ್ಲಿ ತೀರಾ ಪಾತಾಳಕ್ಕೆ ಕುಸಿದಿದ್ದು, ತೀವ್ರ ಬಡತನವನ್ನು ಎದುರಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಪ್ರವಾಸೋದ್ಯಮವೇ ಭೂತಾನ್ ಪಾಲಿನ ರಾಷ್ಟ್ರೀಯ ಆಸ್ತಿ:
ಪ್ರವಾಸೋದ್ಯಮ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೋಮಾಂಚಕ, ತಾರತಮ್ಯವಿಲ್ಲದ, ಅಂತರ್ಗತ ಮತ್ತು ಹೆಚ್ಚಿನ ಮೌಲ್ಯದ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಭೂತಾನ್ ಸರ್ಕಾರವು ತನ್ನ 'ಹೆಚ್ಚಿನ ಮೌಲ್ಯ, ಕಡಿಮೆ ಪ್ರಮಾಣದ' ಪ್ರವಾಸೋದ್ಯಮ ನೀತಿಯನ್ನು ಮರು-ತಂತ್ರಗೊಳಿಸಿದೆ," ಎಂದು ಭೂತಾನ್‌ನ ಕಾನ್ಸುಲ್ ಜನರಲ್ ಜಿಗ್ಮೆ ಥಿನ್ಲೆ ನಾಮ್ಗ್ಯಾಲ್ ಹೇಳಿದ್ದಾರೆ.
ಭೂತಾನ್, ಭಾರತ ಮತ್ತು ಚೀನಾ ನಡುವೆ ಬೆಸೆದುಕೊಂಡಿದೆ. "ಪ್ರವಾಸೋದ್ಯಮವೇ ಭೂತಾನ್ ಪಾಲಿನ ರಾಷ್ಟ್ರೀಯ ಆಸ್ತಿಯಾಗಿದೆ. ನಾವು ಕಾರ್ಬನ್ ತಟಸ್ಥವಾಗಿರಲು ಪ್ರಯತ್ನಿಸುತ್ತಿದ್ದೇವೆ. ಅದು ತನ್ನದೇ ಆದ ವೆಚ್ಚವನ್ನು ಹೊಂದಿದೆ. ನಮ್ಮ ಪ್ರವಾಸೋದ್ಯಮವನ್ನು ಸುಸ್ಥಿರಗೊಳಿಸಲು ನಾವು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಕ್ಕೆ ಇದು ಮುಖ್ಯ ಕಾರಣ," ಎಂದು ಕಾನ್ಸುಲ್ ಜನರಲ್ ಹೇಳಿದ್ದಾರೆ.

English summary
After 2 Years Bhutan Opens For Tourists, 1200 rupees Per Day Fee For Indians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X