ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಹೈದರಾಬಾದ್‌ಗೆ 3 ಗಂಟೆಯಲ್ಲಿ ತಲುಪಬಹುದು!

|
Google Oneindia Kannada News

ಹೈದರಾಬಾದ್‌ನಿಂದ ಬೆಂಗಳೂರಿಗೆ ಸುಮಾರು 600 ಕಿಲೋ ಮೀಟರ್ ದೂರವಿದೆ. ಬಸ್ ಮತ್ತು ರೈಲಿನಲ್ಲಿ ಈ ದೂರವನ್ನು ಕ್ರಮಿಸಲು ಸುಮಾರು 8-10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಕೇವಲ 3 ಗಂಟೆಯಲ್ಲಿ ತಲುಪಿದರೆ ಎಷ್ಟು ಚನ್ನಾಗಿರುತ್ತದೆ? ಅಲ್ಲವೇ, ಅದು ವಿಮಾನದಲ್ಲಲ್ಲ ಬದಲಿಗೆ ರೈಲಿನಲ್ಲಿ!.

ಆ ಕನಸು ನನಸಾಗಿಸಲು ಯೋಜನೆಯೊಂದನ್ನು ಹಾಕಿಕೊಳ್ಳಲಾಗಿದೆ. ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗತಿ ಶಕ್ತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ರಸ್ತೆ, ರೈಲ್ವೆ, ವಿಮಾನಯಾನ ಮತ್ತು ಬಂದರುಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಸುಧಾರಿತ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೇ ಹೊಸ ಯೋಜನೆಯನ್ನು ರೂಪಿಸುತ್ತಿದೆ.

ಚಲಿಸುವ ರೈಲಿನಲ್ಲಿ ಚಾಲಕರು ಗಾಢ ನಿದ್ರೆಗೆ ಜಾರಿದರೆ ಏನಾಗುತ್ತದೆ ? ಈ ಬಗ್ಗೆ ತಿಳಿಯಿರಿಚಲಿಸುವ ರೈಲಿನಲ್ಲಿ ಚಾಲಕರು ಗಾಢ ನಿದ್ರೆಗೆ ಜಾರಿದರೆ ಏನಾಗುತ್ತದೆ ? ಈ ಬಗ್ಗೆ ತಿಳಿಯಿರಿ

ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಸೆಮಿ ಹೈಸ್ಪೀಡ್ ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. 30 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಭಾರತೀಯ ರೈಲ್ವೇ ಸಿದ್ಧವಾಗಿದೆ. ಇದು ಪೂರ್ಣಗೊಂಡ ನಂತರ ಎರಡು ನಗರಗಳ ನಡುವೆ 200 ಕಿಲೋ ಮೀಟರ್ ವೇಗದಲ್ಲಿ ರೈಲುಗಳು ಸಂಚರಿಸಲಿವೆ.

A Semi High Speed Track Is Being Planned Between Hyderabad And Bengaluru

503 ಕಿಲೋ ಮೀಟರ್ ಸೆಮಿ-ಹೈ ಸ್ಪೀಡ್ ಟ್ರ್ಯಾಕ್; ರೈಲಿನ ಮೂಲಕ ಸಿಕಂದರಾಬಾದ್ ಮತ್ತು ಬೆಂಗಳೂರು ನಡುವಿನ ಅಂತರವು 622 ಕಿ.ಮೀ ಆಗಿದ್ದರೆ, ಸೆಮಿ-ಹೈ ಸ್ಪೀಡ್ ಟ್ರ್ಯಾಕ್ ಕೇವಲ 503 ಕಿಲೋ ಮೀಟರ್ ಇದಕ್ಕೆ ಕಾರಣ ಶಂಶಾಬಾದ್ ಬಳಿಯ ವಾಜನಗರ ರೈಲು ನಿಲ್ದಾಣದಿಂದ ಬೆಂಗಳೂರು ಸಮೀಪದ ಯಲಹಂಕ ನಿಲ್ದಾಣದವರೆಗೆ ಮಾತ್ರ ಈ ಟ್ರ್ಯಾಕ್ ನಿರ್ಮಾಣವಾಗುತ್ತಿದೆ. ಈ ರೈಲನ್ನು ಕರ್ನೂಲ್ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

ಪ್ರತಿ ಕಿಲೋ ಮೀಟರ್ ಸೆಮಿ-ಹೈ ಸ್ಪೀಡ್ ಟ್ರ್ಯಾಕ್‌ಗಾಗಿ ರೈಲ್ವೆ ಕಂಪನಿಯು 60 ಕೋಟಿ ರುಪಾಯಿ ವೆಚ್ಚ ಮಾಡಲಿದೆ. ಈ ಟ್ರ್ಯಾಕ್‌ಗೆ ವಾಹನಗಳು ಮತ್ತು ಜನರು ಪ್ರವೇಶಿಸದಂತೆ ಎರಡೂ ಬದಿಗಳಲ್ಲಿ 1.5 ಮೀಟರ್ ಎತ್ತರದ ಗೋಡೆ ನಿರ್ಮಿಸಲಾಗುವುದು. ದೆಹಲಿ-ಮೀರತ್ ಮತ್ತು ಮುಂಬೈ - ಅಹಮದಾಬಾದ್ ನಡುವೆ ಇದೇ ರೀತಿಯ ಟ್ರ್ಯಾಕ್ ನಿರ್ಮಾಣವಾಗಲಿದೆ.

A Semi High Speed Track Is Being Planned Between Hyderabad And Bengaluru

ಪ್ರಸ್ತುತ, ರೈಲ್ವೆ ಅಧಿಕಾರಿಗಳು ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳನ್ನು ಆಧುನೀಕರಿಸುತ್ತಿದ್ದಾರೆ. ಈ ಟ್ರ್ಯಾಕ್‌ಗಳಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಆದರೆ, ಸಿಕಂದರಾಬಾದ್ ಮತ್ತು ಬೆಂಗಳೂರು ನಡುವೆ ನಿರ್ಮಿಸಲಿರುವ ಟ್ರ್ಯಾಕ್‌ನಲ್ಲಿ ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ರೈಲು ಸಂಚರಿಸಲಿವೆ. ಯೋಜನೆ ಪೂರ್ಣಗೊಂಡ ಬಳಿಕ ಹೈದರಾಬಾದ್‌ನಿಂದ ಬೆಂಗಳೂರು ತಲುಪಲು ಕೇವಲ ಮೂರು ಗಂಟೆಗಳು ಬೇಕಾಗುತ್ತದೆ.

ಭಾರತೀಯ ರೈಲ್ವೇ ಈಗಾಗಲೇ 106 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ 302 ವಂದೇ ಭಾರತ್ ಟ್ರೈನ್​ ಸೇವೆ ವಿಸ್ತರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ದೆಹಲಿ ಮತ್ತು ಮೀರತ್ ನಡುವಿನ ಆರ್‌ಆರ್‌ಎಎಸ್ ಕಾರಿಡಾರ್ ಅಥವಾ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್‌ನಂತಹ ವಯಡಕ್ಟ್‌ಗಳನ್ನು ಹೊಂದಿರುವ ಎತ್ತರದ ಮಾರ್ಗ ನಿರ್ಮಿಸಲು ಪ್ರತಿ ಕಿಲೋಮೀಟರ್‌ಗೆ ಸುಮಾರು 300 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

English summary
A semi high speed track is being planned between Hyderabad and Bengaluru. Indian Railways is ready to undertake this project at a cost of Rs 30 thousand crores. After its completion, trains will run between the two cities at a speed of 200 kmph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X